Reels ಮಾಡುವಾಗ ಅಡ್ಡಿಪಡಿಸಿದ ಮಗುವನ್ನು ಕಾಲಿನಿಂದ ಒದ್ದು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಶಾಕಿಂಗ್​ ವಿಡಿಯೋ ವೈರಲ್​

Baby Assault
Published on

ಮಾಸ್ಕೋ: ರೀಲ್ಸ್​ (reels)​ ಮಾಡಲು ಡಿಸ್ಬರ್ಬ್​ ಮಾಡಿತ್ತು ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಅಂಬೆಗಾಲಿಡುವ ಮಗುವನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮಹಿಳೆಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬರುತ್ತಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಇರುವುದನ್ನು ನೋಡಬಹುದಾಗಿದೆ. ಒಬ್ಬ ಮಹಿಳೆ ಫ್ರೇಮ್​ನಿಂದ ಹೊರಬಂದರೆ ಇನ್ನೋರ್ವ ಮಹಿಳೆ ಮಗುವನ್ನು ಕಾಲಿನಿಂದ ಒದೆಯುತ್ತಿರುವುದನ್ನು ನೋಡಬಹುದಾಗಿದೆ. ಮಗು ಬೆಡ್​ನ ಮತ್ತೊಂದು ತುದಿಗೆ ಬಿದ್ದ ಬಳಿಕ ಮಹಿಳೆ ತನ್ನ ಪಾಡಿಗೆ ಡ್ಯಾನ್ಸ್​ ಮಾಡಲು ಆರಂಭಿಸುತ್ತಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕರು ಮಹಿಳೆಯ ನಡೆಗೆ ಕಿಡಿಕಾರಿದ್ದು, ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಇದು ಭಯಾನಕವಾಗಿದೆ. ಇಂತಹ ಕ್ರೌರ್ಯಕ್ಕೆ ಯಾವುದೇ ಕ್ಷಮಿಯಿಲ್ಲ. ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net