

Married My Lover: ನಾನು ನನ್ನ ಪ್ರಿಯಕರನ ಜತೆ ಸ್ವ-ಇಚ್ಚೆಯಿಂದಲೇ ಮದುವೆಯಾಗಿರುವೆ. ನಮಗೆ ಮತ್ತು ನಮ್ಮ ಮಾಜಿ ಕುಟುಂಬದವರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದು ಪತ್ನಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಘಟನೆ ಬಿಹಾರದ ಸಮಸ್ಟಿಪುರದಲ್ಲಿ ನಡೆದಿದೆ. ಯುವತಿಯೊಬ್ಬಳು ತನ್ನ ಪ್ರಿಯಕರ ರಾಜ ಕುಮಾರ್ ಜತೆ ಓಡಿಹೋಗಿ ಆತನನ್ನು ಮದುವೆಯಾಗಿದ್ದೇನೆ ಎಂದು ಹೇಳುವ ವಿಡಿಯೋ ಬಿಡುಗಡೆ ಮಾಡಿದ್ದಾಳೆ.
''ವೀಡಿಯೊದಲ್ಲಿ ತನ್ನನ್ನು ಪರಿಚಯಿಸಿಕೊಳ್ಳುತ್ತಾ, ಯುವತಿ ತನ್ನ ತಂದೆ ಅಶೋಕ್ ಚೌಧರಿ ಸಮಷ್ಟಿಪುರ ಜಿಲ್ಲೆಯ ರಾಜ್ವಾ, ಥಾನಾ ಬಂಗ್ರಾದ ಹಳ್ಳಿಯ ನಿವಾಸಿ. ತಾನು ವಯಸ್ಕಳಾಗಿದ್ದು, ತನ್ನ ಪ್ರಿಯಕರ ರಾಜ ಕುಮಾರ್ ಅವರನ್ನು ಪೂರ್ಣ ಪ್ರಜ್ಞೆಯಿಂದ ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ''.
ನನ್ನ ಪ್ರಿಯಕರ ಕೂಡ ರಾಜ್ವಾ ಗ್ರಾಮದ ನಿವಾಸಿಯೂ ಆಗಿದ್ದಾನೆ ಮತ್ತು ಅವನ ತಂದೆಯ ಹೆಸರು ತುಂಟುನ್ ಪಾಸ್ವಾನ್. ಹುಡುಗಿ ತನ್ನ ವೀಡಿಯೊ ಹೇಳಿಕೆಯಲ್ಲಿ ತಾನು ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದೇನೆ ಮತ್ತು ಯಾರ ಒತ್ತಡಕ್ಕೂ ಮಣಿಯಲಿಲ್ಲ ಎಂದು ಹೇಳಿದ್ದಾಳೆ. ತನ್ನ ಪತಿ ಅಥವಾ ಅವನ ಕುಟುಂಬದ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿದ್ದರೆ ಅಥವಾ ಯಾವುದೇ ಘಟನೆ ಸಂಭವಿಸಿದಲ್ಲಿ, ಅದಕ್ಕೆ ತನ್ನ ಹೆತ್ತವರೇ ಸಂಪೂರ್ಣ ಜವಾಬ್ದಾರರು ಎಂದು ಎಚ್ಚರಿಸಿದ್ದಾಳೆ.(ಏಜೆನ್ಸೀಸ್)