ಐ ಲವ್ ಮೋದಿ ಅಂದ್ರೆ ಓಕೆ, ಐ ಲವ್ ಮೊಹಮ್ಮದ್ ಅಂದ್ರೆ ಯಾಕೆ ಆಕ್ಷೇಪ ಎಂದ ಅಸಾದುದ್ದೀನ್ ಓವೈಸಿ| Asaduddin Owaisi

Untitled design - 2025-10-03T130831.977
Published on

Asaduddin Owaisi: ದೇಶದಲ್ಲಿ ಐ ಲವ್ ಮೋದಿ ಎಂದು ಹೇಳವುದನ್ನು ಸ್ವೀಕಾರ ಮಾಡ್ತಾರೆ, ಆದರೆ ಐ ಲವ್ ಮೊಹಮ್ಮದ್ ಎಂದು ಹೇಳಿದರೆ ಅದಕ್ಕೆ ಯಾಕೆ ಆಕ್ಷೇಪಣೆಗಳು ಬರುತ್ತವೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಐ ಲವ್ ಮೊಹಮ್ಮದ್ ಪೋಸ್ಟರ್‌ಗಳ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಗುರುವಾರ ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ಹಿಂಸಾಚಾರವನ್ನು ಖಂಡಿಸಿದ ಓವೈಸಿ, ಅಧಿಕಾರಿಗಳು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ನಾವು ಕಾನೂನಿನೊಳಗೆ ಎಲ್ಲವನ್ನೂ ಮಾಡಬೇಕು. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ ಎಂದು  ಮುಸ್ಲಿಮರು ತಾಳ್ಮೆಯಿಂದ ಪ್ರತಿಕ್ರಿಯಿಸಬೇಕೆಂದಿದ್ದಾರೆ.

ಈ ದೇಶದಲ್ಲಿ ಒಬ್ಬರು 'ನಾನು ಮೋದಿಯನ್ನು ಪ್ರೀತಿಸುತ್ತೇನೆ' ಎಂದು ಹೇಳಬಹುದಾದರೆ, 'ನಾನು ಮೊಹಮ್ಮದ್ ಅವರನ್ನು ಪ್ರೀತಿಸುತ್ತೇನೆ' ಎಂದು ಯಾಕೆ ಹೇಳಬಾರದು. ನೀವು ಈ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ?, ಯಾರಾದರೂ ಐ ಲವ್ ಮೋದಿ ಎಂದು ಹೇಳಿದ್ರೆ, ಮಾಧ್ಯಮಗಳು ಸಹ ಸಂತೋಷ ಪಡುತ್ತವೆ. ಯಾರಾದರೂ ಐ ಲವ್ ಮೊಹಮ್ಮದ್ ಅಂದ್ರೆ ಆಕ್ಷೇಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಾನು ಮುಸ್ಲಿಂನಾಗಿದ್ದರೆ ಅದಕ್ಕೆ ಮೊಹಮ್ಮದ್ ಕಾರಣ. ದೇಶದ ಸ್ವಾತಂತ್ರ್ಯದಲ್ಲಿ ಭಾಗವಹಿಸಿದ 17 ಕೋಟಿ ಭಾರತೀಯರಿಗೆ ಅದಕ್ಕಿಂತ ಹೆಚ್ಚಿನದೇನೂ ಇಲ್ಲ. ನಾವು ಹಿಂಸಾಚಾರವನ್ನು ಖಂಡಿಸುತ್ತೇವೆ. ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ಮತ್ತು ಅಂಗಡಿಯವರು ಅವರ ಮೇಲೆ ಹೂವುಗಳನ್ನು ಸುರಿಸುತ್ತಿರುವ ವೀಡಿಯೊಗಳಿವೆ. ಪೊಲೀಸರು ಅಧಿಕಾರದಲ್ಲಿರುವವರಿಗೆ ಮಾತ್ರ ಹೊಣೆಗಾರರಾಗಿದ್ದಾರೆ. ಬೇರೆ ಯಾರಿಗೂ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ನಾಳೆ ಅಧಿಕಾರ ಬದಲಾದಾಗ ಅವರು ನಿಮ್ಮನ್ನು ಹೊಡೆಯುತ್ತಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net