'ಪ್ರೇಕ್ಷಕರ ದುಡ್ಡು, ಸಮಯ ವ್ಯರ್ಥ ಆಗಬಾರದು'; ಸಿನಿಪ್ರೇಕ್ಷಕರ ಬಗ್ಗೆ ಸ್ಟೈಲಿಶ್ ಸ್ಟಾರ್​ ಹೇಳಿದ್ದಿಷ್ಟು

Untitled design - 2024-02-19T103556.054
Published on

ಆಂಧ್ರಪ್ರದೇಶ: ಟಾಲಿವುಡ್​ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ಸದ್ಯ ಪ್ಯಾನ್ ಇಂಡಿಯಾ ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದು, ಈ ಮಧ್ಯೆ ಇತ್ತೀಚೆಗಷ್ಟೇ ಸಿನಿಮಾದ ಶೂಟಿಂಗ್ ನಿಲ್ಲಿಸಿ, ಜರ್ಮನಿಯ ಬರ್ಲಿನ್​ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಪುಷ್ಪ ಭಾಗ 1ರ ವಿಶೇಷ ಸ್ಕ್ರೀನಿಂಗ್​ ವೀಕ್ಷಣೆ ಮಾಡಿದರು. ಈ ವಿಚಾರ ತಿಳಿದ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರು, ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ನಿಮಗೆ ಧನ್ಯವಾದಗಳನ್ನು ಎಂದು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ನಟನ ಮತ್ತೊಂದು ಹೇಳಿಕೆಗೆ ಫಿದಾ ಆಗಿರುವ ಫ್ಯಾನ್ಸ್​, ನಿಮ್ಮ ಈ ಸರಳತೆ, ಕಾಳಜಿಗೆ ಶುಭವಾಗಲಿ ಎಂದಿದ್ದಾರೆ.

ಜರ್ಮನಿ ಬರ್ಲಿನ್​ಗೆ ತೆರಳಿದ ಬಳಿಕ ಸಂದರ್ಶನದಲ್ಲಿ ಮಾತನಾಡಿದ ಸ್ಟೈಲಿಶ್ ಸ್ಟಾರ್, "ಸಿನಿಮಾ ಬಗ್ಗೆ ಪ್ರೇಕ್ಷಕರು ತುಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಜಾಗತಿಕ ಮಟ್ಟದಲ್ಲಿ ನನ್ನ ಚಿತ್ರ ಹಿಟ್ ಆಗುತ್ತಿರುವುದು ನನಗೆ ಬಹಳ ಹೆಮ್ಮೆ ತಂದಿದೆ. ಅದರ ಬಗ್ಗೆ ತುಂಬ ಗೌರವವೂ ಇದೆ ಹಾಗೂ ಜವಾಬ್ದಾರಿ ಕೂಡ ಹೆಚ್ಚಿದೆ. ಅವರನ್ನು ಮನರಂಜಿಸುವದಷ್ಟೇ ನನ್ನ ಕೆಲಸ, ಉದ್ದೇಶ" ಎಂದು ಹೇಳಿದರು.

"ಪ್ರೇಕ್ಷಕರ ನಿರೀಕ್ಷೆಗಳಿಗಿಂತ ಅವರ ಅಪಾರ ಪ್ರೀತಿ ಹಾಗೂ ಅವರನ್ನು ಮನರಂಜಿಸಬೇಕು ಅನ್ನೋದು ಬಹಳ ಮುಖ್ಯವಾಗಿದೆ. ಜನರ ದುಡ್ಡು, ಸಮಯ ವ್ಯರ್ಥ ಮಾಡಲು ನನಗೆ ಇಷ್ಟವಿಲ್ಲ. ಒಂದೊಳ್ಳೆ ಸಿನಿಮಾ ಮಾಡಬೇಕು, ಅವರಿಗೆ ಖುಷಿ ಕೊಡುವ ಚಿತ್ರವನ್ನು ಮಾಡಬೇಕು ಅಷ್ಟೇ" ಎಂದು ಹೇಳಿಕೊಂಡಿದ್ದಾರೆ. ಸದ್ಯ ಸಂದರ್ಶನದ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನಟನ ಹೇಳಿಕೆ, ದೂರದೃಷ್ಟಿ, ಸ್ಪಷ್ಟತೆ ಬಗ್ಗೆ ಮೆಚ್ಚುಗೆ ವ್ಯಕ್ತಡಿಸುತ್ತಿರುವ ಅಭಿಮಾನಿಗಳು, 'ಪುಷ್ಪ2' ನೋಡಲು ಬಹಳ ಕಾತರದಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net