More

    ‘ಬಾಡಿಗೆ ಕಟ್ಟಕ್ಕೂ ಒಬ್ಬ ಪುರುಷನಿಲ್ಲ’! ಆ ನಟನ ಹೇಳಿಕೆಗೆ ನೋರಾ ಫತೇಹಿ ಶಾಕಿಂಗ್ ತಿರುಗೇಟು

    ಮುಂಬೈ: ಚಿತ್ರರಂಗಕ್ಕೆ ಬರುವ ಮುನ್ನ ಅನೇಕ ಕಲಾವಿದರು ಹಲವು ರೀತಿಯಲ್ಲಿ ತಮ್ಮ ಕಷ್ಟಕರ ದಿನಗಳನ್ನು ಎದುರಿಸಿ ಇಂದು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿ ಹೊರಹೊಮ್ಮಿರುತ್ತಾರೆ. ಪ್ರಾರಂಭದ ದಿನಗಳಲ್ಲಿ ಸಹಿಸಲಾಗದ ಕಷ್ಟ, ಅನುಭವಿಸಲಾಗದ ದುಃಖ ಎಲ್ಲವೂ ತುಂಬಿ ತುಳಕಾಡುತ್ತಿರುತ್ತದೆ. ಇಂತಹ ಪರಿಸ್ಥಿತಿಯನ್ನು ಭೇದಿಸಿ ಸಾಧನೆ ಹಾದಿ ಹಿಡಿದು, ಎಲ್ಲರ ಮೆಚ್ಚುಗೆಗೆ ಪಾತ್ರರಾದವರ ಪೈಕಿ ಬಾಲಿವುಡ್​ ನಟಿ, ಮಾಜಿ ಬಿಗ್​ ಬಾಸ್​ ಸ್ಪರ್ಧಿ ನೋರಾ ಫತೇಹಿ ಕೂಡ ಒಬ್ಬರು.

    ಇದನ್ನೂ ಓದಿ: ಪಾರ್ವತಿರವರ ಆದರ್ಶಪ್ರಾಯ ಜೀವನ ಎಲ್ಲರಿಗೂ ಮಾದರಿ: ಕೆ.ಬಿ.ಗಣಪತಿ

    ಕೇವಲ 5000 ರೂಪಾಯಿಗಳೊಂದಿಗೆ ಭಾರತಕ್ಕೆ ಬಂದ ನನಗೆ 1000 ಡಾಲರ್ ಬಿಲ್ ಹೇಗಿರುತ್ತದೆ ಎಂಬ ಪರಿಕಲ್ಪನೆಯೂ ಇರಲಿಲ್ಲ ಎಂದ ನೋರಾ ಇದೀಗ ಬಾಲಿವುಡ್​ ಸ್ಟಾರ್​ ಅಕ್ಷಯ್​ ಕುಮಾರ್​ ತನ್ನ ಬಗ್ಗೆ ನೀಡಿದ ಹೇಳಿಕೆಗೆ ಶಾಕಿಂಗ್ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ನೋರಾ ಒಬ್ಬಳು ‘ಗುಜರಾತಿ’, ಆಕೆ ದುಡ್ಡಿನ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ ಎಂದಿದ್ದ ಅಕ್ಷಯ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಫತೇಹಿ, “ಜೀವನದಲ್ಲಿ ನನ್ನ ಜವಾಬ್ದಾರಿ ತೆಗೆದುಕೊಳ್ಳುವಂತ ಒಬ್ಬ ಗಂಡಸ್ಸೂ ಇಲ್ಲ. ಬಾಡಿಗೆ ಕಟ್ಟಲು ಸಹವಿಲ್ಲ. ಹಾಗಿದ್ದ ಮೇಲೆ ನನ್ನ ಜೀವನದಲ್ಲಿ ಹೆಚ್ಚು ದುಡ್ಡು ಸಂಪಾದನೆ ಮಾಡಲೇಬೇಕಲ್ವಾ?” ಎಂದಿದ್ದಾರೆ.

    “ನನ್ನ ಕುಟುಂಬಕ್ಕಾಗಿ ಹಣ ಸಂಪಾದಿಸಲು ಹಗಲಿರುಳು ಕೆಲಸ ಮಾಡುವುದನ್ನು ಒಪ್ಪಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಇದು ನನಗೆ ತುಂಬಾ ಮುಖ್ಯವಾಗಿದೆ. ದಿನದಲ್ಲಿ 24/7 ಕೆಲಸ ಮಾಡ್ತೀನಿ. ಒಂದೇ ದಿನದಲ್ಲಿ ಏಕಕಾಲಕ್ಕೆ ಎರಡರಿಂದ ಮೂರು ಶೂಟ್ ಮುಗಿಸುತ್ತೇನೆ. ನಾನು ಸಮಯದ ಜತೆಗೆ ಕೆಲಸ ಮಾಡುವ ಹುಡುಗಿ, ಈ ಕೆಲಸಗಳನ್ನು ಮಾಡಲು ಬಲವಾದ ಕಾರಣಗಳಿವೆ” ಎಂದು ಹೇಳಿದರು.

    ಇದನ್ನೂ ಓದಿ: ವೀಣಾ ಅಸಮಾಧಾನದ ಮಧ್ಯೆಯೂ ಸಂಯುಕ್ತಾ ಬಿರುಸಿನ ಮತಬೇಟೆ

    “ನನ್ನ ಹಣವನ್ನು ನಾನೇ ಸಂಪಾದಿಸ್ತೀನಿ. ಯಾರ ಮೇಲೂ ಅವಲಂಬಿತಳಾಗಿಲ್ಲ. ಮನೆ ಬಾಡಿಗೆ ಮತ್ತು ಬಿಲ್‌ಗಳನ್ನು ಪಾವತಿಸ್ತೀನಿ. ನನ್ನ ತಾಯಿ, ಒಡಹುಟ್ಟಿದವರು ಮತ್ತು ಸ್ನೇಹಿತರನ್ನು ಸಹ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಈ ಜೀವನದಲ್ಲಿ ನನಗಾಗಿ ದುಡಿದು, ನನ್ನ ಕನಸುಗಳನ್ನು ಈಡೇರಿಸುವ ಅಥವಾಆ ಮತ್ತು ಮನೆ ಬಾಡಿಗೆ ನೋಡಿಕೊಳ್ಳುವ ಗಂಡಸ್ಸು ನನ್ನ ಜತೆಗಿಲ್ಲ” ಎಂದಿದ್ದಾರೆ.

    “16ನೇ ವಯಸ್ಸಿನಲ್ಲಿ ದುಡಿಯಲು ಪ್ರಾರಂಭಿಸಿದ ನಾನು, ಬಾಲ್ಯದ ಒಳ್ಳೆಯ ಜೀವನವನ್ನು ನೋಡಲೇ ಇಲ್ಲ. ಅದನ್ನು ಸಂಪೂರ್ಣವಾಗಿ ಅನುಭವಿಸುವ ಪುಣ್ಯವು ನನಗೆ ಸಿಗಲಿಲ್ಲ. ಆದರೆ, ಇಂದು ನಾನು ತಲುಪಿರುವ ಉನ್ನತ ಸ್ಥಾನ ನೆನೆದರೆ ನನ್ನ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ” ಎಂದು ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

    ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..

    ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts