ನವದೆಹಲಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ಜನರಲ್ಲಿದ್ದ ಭಯ ಈಗ ಕೊನೆಗೊಂಡಿದೆ. ಮೋದಿಯವರ 56 ಇಂಚಿನ ಎದೆ, ದೇವರೊಂದಿಗಿನ ನೇರ ಸಂಪರ್ಕದ ಕಲ್ಪನೆಯೂ ಮುಗಿದಿದೆ. ಅದು ಈಗ ಇತಿಹಾಸ, ಅವರು ಹಿಂದೆಂದೂ ಎದುರಿಸದ ವ್ಯಕ್ತಿ ಎಂದು ನಾನು ನಿಮಗೆ ಹೇಳಬಲ್ಲೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಹೇಳಿದರು.
ಇದನ್ನು ಓದಿ: ರಾಹುಲ್ ಗಾಂಧಿ ಯಾವಾಗಲೂ ಚೀನಾವನ್ನು ಪ್ರಚಾರ ಮಾಡ್ತಾರೆ; ಸಿಎಂ ಹಿಮಂತ ಬಿಸ್ವಾ ಶರ್ಮಾ ಹೀಗೆಳಿದ್ದೇಕೆ?
ಪ್ರಸ್ತುತ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ಗಾಂಧಿ ವರ್ಜೀನಿಯಾದ ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಮತ್ತು ಹೆರ್ಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ತಪ್ಪು ಕಲ್ಪನೆಯೆಂದರೆ, ಭಾರತವು ವಿಭಿನ್ನ ವಿಷಯಗಳ ಸಂಪೂರ್ಣ ಗುಂಪಾಗಿದೆ ಎಂದು ಅವರು ಭಾವಿಸುತ್ತಾರೆ. ಭಾರತ ಅರ್ಥವಾಗದ ಕಾರಣ ಆರ್‌ಎಸ್‌ಎಸ್ ಕೆಲವು ರಾಜ್ಯಗಳನ್ನು ಇತರ ರಾಜ್ಯಗಳಿಗಿಂತ ಕೀಳು ಎಂದು ಬಿಂಬಿಸಲು ಯತ್ನಿಸುತ್ತಿದೆ.
ಆದರೆ ಭಾರತವು ಭಾಷೆಗಳು, ಸಂಪ್ರದಾಯಗಳು, ಧರ್ಮಗಳ ಒಕ್ಕೂಟವಾಗಿದೆ. ಭಾರತೀಯರು ತಮ್ಮ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ದೇವರ ಸ್ಮರಣೆಯಲ್ಲಿ ಮುಳುಗುತ್ತಾರೆ. ಇದು ಭಾರತೀಯ ಜನರ ಸ್ವಭಾವ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತವು ವಿಭಿನ್ನ ವಸ್ತುಗಳ ಸಂಪೂರ್ಣ ಗುಂಪಾಗಿದೆ ಎಂದು ಭಾವಿಸುತ್ತಾರೆ. ನಾನು ಅವರ ದೃಷ್ಟಿಕೋನವನ್ನು ಒಪ್ಪುವುದಿಲ್ಲ. ಆದರೆ ನಾನು ನರೇಂದ್ರ ಮೋದಿಯನ್ನು ದ್ವೇಷಿಸುವುದಿಲ್ಲ. ಅನೇಕ ಕ್ಷಣಗಳಲ್ಲಿ ಅವರ ಮೇಲೆ ನಾನು ಸಹಾನುಭೂತಿ ಹೊಂದಿದ್ದೇನೆ ಎಂದಿದ್ದಾರೆ.
2024ರ ಲೋಕಸಭೆ ಚುನಾವಣೆಯ ನಂತರ ಭಾರತದಲ್ಲಿ ಕೆಲವು ಬದಲಾವಣೆಗಳು ಆಗಿವೆ. ಭಯದ ವಾತಾವರಣ ಮಾಯವಾಗಿದೆ. ಮಾಧ್ಯಮಗಳು ಮತ್ತು ಏಜೆನ್ಸಿಗಳ ಒತ್ತಡದಿಂದ ಬಿಜೆಪಿ ಮತ್ತು ಪ್ರಧಾನಿ ಜನರಲ್ಲಿ ಭಯವನ್ನು ಸೃಷ್ಟಿಸಿದ್ದಾರೆ. ಆದರೆ ಚುನಾವಣಾ ಫಲಿತಾಂಶದ ನಂತರ ಈ ಭಯ ಕ್ಷಣಾರ್ಧದಲ್ಲಿ ಮಾಯವಾಯಿತು. ಈ ಭಯವನ್ನು ಹರಡಲು ಅವರಿಗೆ ಹಲವು ವರ್ಷಗಳು ಮತ್ತು ಸಾಕಷ್ಟು ಪ್ಲ್ಯಾನ್ ಮಾಡಿದ್ದರು. ಆದರೆ ಅದು ಕೊನೆಗೊಳ್ಳಲು ಕೇವಲ ಒಂದು ಕ್ಷಣ ತೆಗೆದುಕೊಂಡಿತು ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಪ್ರಧಾನಿ ಮೋದಿ ಸರ್ಕಾರದ ವೈಫಲ್ಯಕ್ಕೆ ಇದೊಂದು ನಿದರ್ಶನ; ಕಾಂಗ್ರೆಸ್ ಅಧ್ಯಕ್ಷ ಹೀಗೆಳಿದ್ದೇಕೆ?