ನವದೆಹಲಿ: ಯುಎಸ್ಎ-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ತಂಡದ ಸರ್ವಾಂಗೀಣ ಪ್ರದರ್ಶನದ ಫಲವಾಗಿ ಭಾರತ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನೂ ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎದಂರೆ ತಪ್ಪಾಗಲಾರದು. ಇದೀಗ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಹಾರ್ದಿಕ್ ಪಾಂಡ್ಯರನ್ನು ಹಾಡಿಹೊಗಳಿದ್ದು, ಫ್ಯಾನ್ಸ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
17ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೂ ಮುಂಚಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿರುವ ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಈ ವಿಚಾರಗಳಿಗೆ ಹಾರ್ದಿಕ್ ಪಾಂಡ್ಯ ಹೆಚ್ಚು ಟ್ರೋಲ್ ಆಗಿದ್ದರು. ಇದೀಗ ಈ ಕುರಿತು ಮಾತನಾಡಿರುವ ಅಂಬಾಟಿ ರಾಯುಡು ಹಾರ್ದಿಕ್ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ ಮತ್ತು ಟ್ರೋಲ್ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಾಥರಸ್ ಕಾಲ್ತುಳಿತ ಪ್ರಕರಣ; 6 ಮಂದಿ ಆಯೋಜಕರು ಅರೆಸ್ಟ್, ಪ್ರಮುಖ ಆರೋಪಿ ಪತ್ತೆಗೆ ಭರ್ಜರಿ ಗಿಫ್ಟ್ ಘೋಷಿಸಿದ ಪೊಲೀಸರು
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಈ ಕುರಿತು ಮಾತನಾಡಿದ ರಾಯುಡು, ನನ್ನ ಪ್ರಕಾರ ಇದು ಅವನ ಅತ್ಯದ್ಭುತ ಆಟವಾಗಿದ್ದು, ಅವನು ಶ್ರೇಷ್ಟ ಆಟವಾಡಿದ್ದಾನೆ. ಆತ ಮಾನಸಿಕ ಶಕ್ತಿಯೇ ಈ ಪ್ರದರ್ಶನಕ್ಕೆ ಕಾರಣವಾಗಿದ್ದು, ಇನ್ನೂ ಮುಂದೆ ಯಾರಾದರು ಆತನ ವಿರುದ್ಧ ಮಾತನಾಡುವುದಾಗಲಿ ಅಥವಾ ಟ್ರೋಲ್ ಮಾಡುವುದಾಗಲಿ ಮಾಡಿದರೆ ಹುಷಾರ್. ಆತನೊಂದಿಗೆ ನಾನು ಆಟವಾಡಿದ್ದು, ಒಬ್ಬ ಅದ್ಭುತ ಆಟಗಾರ ಎಂದು ಹೇಳುತ್ತೇನೆ.
ತಿಂಗಳುಗಳ ಹಿಂದೆ ಆತ ಇದ್ದಿದ್ದ ಪರಿಸ್ಥಿತಿಗೂ ಈಗ ಇರುವುದಕ್ಕೂ ಸಾಕಷ್ಟು ಬದಲಾವಣೆಗಳು ಕಂಡು ಬಂದಿದ್ದು, ಆತ ತೂಫಾನಿನಂತೆ ಕಮ್ಬ್ಯಾಕ್ ಮಾಡಿದ್ದಾನೆ. ಈಗ ಆತ ವಿಶ್ವಚಾಂಪಿಯನ್ ಆಗಿದ್ದು, ಇದನ್ನೂ ಯಾರಿಂದಲೂ ನಂಬಲು ಸಾಧ್ಯವಿಲ್ಲ. ಆತ ಬಹಳಷ್ಟು ವರ್ಷಗಳಿಂದ ಭಾರತ್ಕಕೆ ಮ್ಯಾಚ್ ವಿನ್ನರ್ ಆಗಿದ್ದಾನೆ. ಇದನ್ನು ಆತ ಬಹಳಷ್ಟು ಬಾರಿ ನಿರೂಪಿಸಿದ್ದಾನೆ. ಭಾರತ ಗೆದ್ದಾಗ ಆತ ಸಂತೋಷ್ ವ್ಯಕ್ತಪಡಿಸಿದ ರೀತಿ ನೋಡಿದರೆ ತಿಳಿಯುತ್ತದೆ ಎಂದು ಹೇಳುವ ಮೂಲಕ ಅಂಬಾಟಿ ರಾಯುಡು ಹಾರ್ದಿಕ್ ಪಾಂಡ್ಯರನ್ನು ಹಾಡಿ ಹೊಗಳಿದ್ದಾರೆ.