ಕೈದಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಸಿಕ್ಕಿಬಿದ್ದ ಮಹಿಳಾ ಪೊಲೀಸ್​; ವಿಡಿಯೋ ವೈರಲ್

Arrest
Published on

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳಾ ಜೈಲಧಿಕಾರಿಯೊಬ್ಬರು ಖೈದಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದು, ಸಸ್ಪೆಂಡ್​ ಆಗಿರುವ ಘಟನೆ ನೈಋತ್ಯ ಲಂಡನ್‌ನ ಹೆಚ್‌ಎಂಪಿ ವಾಂಡ್ಸ್‌ವರ್ತ್ ಜೈಲಿನಲ್ಲಿ ನಡೆದಿದೆ.

ಲಿಂಡಾ ಡಿ ಸೌಸಾ ಅಬ್ರೂ (30) ಹೆಚ್‌ಎಂಪಿ ವಾಂಡ್ಸ್‌ವರ್ತ್ ಜೈಲಿನ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಬಳಿಕ ಅವರನ್ನು ಸಸ್ಪೆಂಡ್​ ಮಾಡಿ ಆಕ್ಸ್‌ಬ್ರಿಡ್ಜ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಮಹಿಳಾ ಜೈಲಧಿಕಾರಿಯು ತಮ್ಮ ಕಚೇರಿಯಲ್ಲೇ ಕೈದಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದು, ಈ ಕೃತ್ಯ ಕಚೇರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದಲ್ಲದೆ ಕೈದಿಯೊಬ್ಬ ಇದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಹೆಚ್‌ಎಂಪಿ ವಾಂಡ್ಸ್‌ವರ್ತ್ ಜೈಲು 1851ರಲ್ಲಿ ಸ್ಥಾಪಿಸಲಾದ ವಿಕ್ಟೋರಿಯನ್ ಯುಗದ ಕಟ್ಟಡವಾಗಿದ್ದು, ಇಲ್ಲಿ 1,500ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಈ ಜೈಲು ಪ್ರಸ್ತುತ ಅದರ ಉದ್ದೇಶಿತ ಸಾಮರ್ಥ್ಯಕ್ಕಿಂತ ಶೇ. 163ರಷ್ಟು ಹೆಚ್ಚು ಕೈದಿಗಳನ್ನು ಇರಿಸಿಕೊಂಡಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net