Oyo Room : ಪ್ರೇಯಸಿಯೊಂದಿಗೆ ಓಯೋ ರೂಮ್ನಲ್ಲಿ ಉಳಿದುಕೊಂಡಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈದರಾಬಾದ್ನ ರಾಮನಾಥಪುರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಯುವಕನನ್ನು ಓಯೋ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿಗೆ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಯುವಕನನ್ನು ಹೈದರಾಬಾದ್ನ ಬೇಗುಂಬಜಾರ್ನ ನಿವಾಸಿ ಎಂದು ಗುರುತಿಸಲಾಗಿದೆ. ಪ್ರಿಯಕರನ ನಡೆಯಿಂದ ಪ್ರೇಯಸಿಗೆ ಆಘಾತವಾಗಿದೆ.
ಪ್ರೇಮಿಗಳಾದ ಸೌಮ್ಯ ಮತ್ತು ಓಂಕಾರ್ ರಾಮನಾಥಪುರದಲ್ಲಿರುವ ಓಯೋ ರೂಮ್ನಲ್ಲಿ ನಿನ್ನೆ ಉಳಿದುಕೊಂಡಿದ್ದರು. ರಾತ್ರಿಯಿಡೀ ರೂಮ್ನಲ್ಲೇ ತಂಗಿದ್ದರು. ಇಂದು ಮುಂಜಾನೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಪ್ರೇಯಿಸಿಯ ಮಾತುಗಳಿಂದ ಬೇಸತ್ತ ಓಂಕಾರ್, ಓಯೋ ರೂಮ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಯಾವ ಕಾರಣಕ್ಕೆ ಪ್ರೇಮಿಗಳ ನಡುವೆ ಜಳವಾಯಿತೋ ತಿಳಿದುಬಂದಿಲ್ಲ. ಆದರೆ, ಓಂಕಾರ್ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)