

ಕೊಚ್ಚಿ: ಐಪಿಎಲ್ 16ನೇ ಆವೃತ್ತಿಯ ಪೂರ್ವಭಾವಿಯಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನವೇ ಕನ್ನಡಿಗ ಮಯಾಂಕ್ ಅಗರ್ವಾಲ್ ಸನ್ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ. 8.25 ಕೋಟಿ ರೂ. ಬಿಡ್ ಮೊತ್ತದೊಂದಿಗೆ ಮಯಾಂಕ್ ಹೈದರಾಬಾದ್ ಪ್ರಾಂಚೈಸಿ ಸೇರಿಕೊಂಡಿದ್ದಾರೆ.
ಕಳೆದ ಸೀಸನ್ನಲ್ಲಿ ಪಂಜಾಬ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಮಯಾಂಕ್ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಮೂಲ ಬೆಲೆ 1 ಕೋಟಿ ರೂ. ಹೊಂದಿದ್ದರು. ಹರಾಜಿನಲ್ಲಿ ಮಯಾಂಕ್ ಹೆಸರು ಕಾಣಿಸಿಕೊಳ್ಳುತ್ತಿದ್ದಂತೆ ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಮಯಾಂಕ್ ಅಗರ್ವಾಗಲ್ ಖರೀದಿಸಲು ಪೈಪೋಟಿ ನಡೆಸಿದವು.
ಬಿಡ್ನಲ್ಲಿ ಮಯಾಂಕ್ ಬೆಲೆ 3 ಕೋಟಿ ರೂ. ದಾಟುತ್ತಿದ್ದಂತೆ ಆರ್ಸಿಬಿ ಹಿಂದೆ ಸರಿಯಿತು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ನಡುವೆ ಮತ್ತೆ ಪೈಪೋಟಿ ಏರ್ಪಟ್ಟಿತು. ಚೆನ್ನೈ ಮಯಾಂಕ್ಗೆ 5.50 ಕೋಟಿ ರೂ. ಬಿಡ್ ಮಾಡಿದರೆ, ಪಂಜಾಬ್ 5.75 ಕೋಟಿ ರೂ. ಬಿಡ್ ಮಾಡಿತು. ಈ ವೇಳೆ ಒಮ್ಮಿಂದೊಮ್ಮೆಲೆ ಚೆನ್ನೈ ಮೊತ್ತವನ್ನು ಹಿಗ್ಗಿಸಿ ಮಯಾಂಕ್ಗೆ 7.50 ಕೋಟಿ ಬಿಡ್ ಮಾಡಿತು. ಈ ವೇಳೆ ಹೈದರಾಬಾದ್ 7.75 ಕೋಟಿ ರೂ. ಬಿಡ್ ಮಾಡಿತು. ಅಂತಿಮವಾಗಿ 8.25 ಕೋಟಿ ರೂ. ಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು.