ಗಂಡನ ಭೀಕರ ಕೊಲೆ... ಪೊಲೀಸ್​ ಕರೆ ಬಂದಿದ್ದೆ ತಡ: ಮನೆಗೆ ಬೀಗ ಹಾಕಿ ಪತ್ನಿ ಪರಾರಿ! | Murder

dk - 2025-07-01T191131.055
Published on

Murder: ಹೈದರಾಬಾದ್​ನ ಪಸುಮಾಮುಲ ಪ್ರದೇಶದ ವ್ಯಾಪ್ತಿಯಲ್ಲಿ ಕೊಲೆ ಶಂಕಿತ ವ್ಯಕ್ತಿಯ ದೇಹವೊಂದು ಪತ್ತೆಯಾಗಿದ್ದು, ಮೃತ ದೇಹದ ಶರ್ಟ್​ ಪ್ಯಾಕೆಟ್​​ನಲ್ಲಿದ್ದ ನಂಬರೊಂದಕ್ಕೆ ಪೊಲೀಸರು ಕರೆ ಮಾಡಿದ್ದಾರೆ. ಕರೆ ಬಂದ ಹಿನ್ನೆಲೆ ಆತನ ಪತ್ನಿ ಮನೆಬಾಗಿಲಿಗೆ ಬೀಗ ಹಾಕಿ ಪರಾರಿಯಾದ ಘಟನೆ ಸೋಮವಾರ ನಡೆದಿದೆ.

ಹೌದು, ನಾಗೋಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ, ನಂತರ ನಗರದ ಹೊರವಲಯದಲ್ಲಿರುವ ನಿರ್ಜನ ಪ್ರದೇಶದಲ್ಲಿ ಎಸೆದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಶವದ ಬಳಿ ದೊರೆತ ವಿವರಗಳ ಆಧಾರದ ಮೇಲೆ, ಮೃತನನ್ನು ಕಾಚೆಗುಡದ ಅಶೋಕ್ ಯಾದವ್ ಎಂದು ಗುರುತಿಸಲಾಗಿದೆ.

ಕಾಚೆಗುಡದಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿರುವ ಅಶೋಕ್ ಯಾದವ್ ಅವರಿಗೆ ಪತ್ನಿ ಕ್ರಾಂತಿ ದೇವಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ತನಿಖೆ ತಂಡವು ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಅಶೋಕ್ ಯಾದವ್ ಅವರ ಮೃತದೇಹ ಪತ್ತೆಯಾದ ಫೋನ್ ಸಂಖ್ಯೆಯನ್ನು ಆಧರಿಸಿ ಪೊಲೀಸರು ಅವರ ಪತ್ನಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ಮನೆಗೆ ಬರುತ್ತಿದ್ದಾರೆ ಎಂಬ ಮಾಹಿತಿ ಬಂದ ಕೂಡಲೇ, ಅವರ ಪತ್ನಿ ಮನೆಗೆ ಬೀಗ ಹಾಕಿ, ಜ್ಯೂಸ್ ಸೆಂಟರ್ ಮುಚ್ಚಿ, ತನ್ನ ಮೊಬೈಲ್ ಫೋನ್ ಆಫ್ ಮಾಡಿ ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಆಕೆ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net