ವಿಜಯವಾಣಿ ಸುದ್ದಿಜಾಲ ಸುಳ್ಯ
ತಾಲೂಕಿನ ನೆಲ್ಲೂರು&ಕೆಮ್ರಾಜೆಯ ಕೋಡಿಮಜಲು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪತಿ, ಪತ್ನಿ ಹಾಗೂ ಪುತ್ರನ ನಡುವೆ ಕಲಹ ಏರ್ಪಟ್ಟು ಕೋಪದಲ್ಲಿ ಪತಿ, ಪತ್ನಿಯನ್ನು ಗುಂಡಿಟ್ಟು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಟನೆ ಶುಕ್ರವಾರ ರಾತ್ರಿ ನಡೆದಿದೆ.
ವಿನೋದಾ (43) ಗುಂಡೇಟಿಗೆ ಬಲಿಯಾಗಿದ್ದು, ಪತಿ ರಾಮಚಂದ್ರ ಗೌಡ (52) ಆತ್ಮಹತೆ ಮಾಡಿಕೊಂಡವರು.
ಪತಿ, ಪತ್ನಿಯರ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿದ್ದು ಪತಿ ರಾಮಚಂದ್ರ ಪತ್ನಿಯನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಶುಕ್ರವಾರ ರಾತ್ರಿಯೂ ಗಲಾಟೆ ನಡೆದಿತ್ತು. ಈ ವೇಳೆ ದಂಪತಿಯ ಮೂರು ಮಕ್ಕಳಲ್ಲಿ ಓರ್ವ ಪುತ್ರ ಪ್ರಶಾಂತನೂ ಮನೆಯಲ್ಲಿದ್ದು ತಂದೆ ಗಲಾಟೆ ಮಾಡುತ್ತಿದ್ದಾಗ ಪ್ರಶ್ನಿಸಿದ. ಈ ವೇಳೆ ಕುಪಿತನಾದ ತಂದೆ ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲೆಂದು ಪರವಾನಗಿ ಪಡೆದಿದ್ದ ಕೋವಿ ತೆಗೆದು ಮಗನಿಗೆ ಗುಂಡು ಹಾರಿಸುವುದಾಗಿ ಬೆದರಿಸಿದ. ಇದನ್ನು ನೋಡಿದ ಪತ್ನಿ ಮಗನ ರಕ್ಷಣೆಗಾಗಿ ಧಾವಿಸಿದರು. ಈ ವೇಳೆ ಪತಿಯ ಕೋವಿಯಿಂದ ಸಿಡಿದ ಗುಂಡು ಪತ್ನಿಯ ಎದೆಗೆ ತಾಗಿತು. ಆಕೆ ಸ್ಥಳದಲ್ಲೇ ಅಸು ನೀಗಿದರು. ಬಳಿಕ ಭೀತಿಗೊಂಡ ಪತಿ ರಾಮಚಂದ್ರ, ರಬ್ಬರ್ ಶೀಟ್ ಮಾಡಲೆಂದು ತಂದಿರಿಸಿದ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಟನಾ ಸ್ಥಳಕ್ಕೆ ಐಜಿಪಿ ಅಮಿತ್ ಸಿಂಗ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಟನೆಯ ಮಾಹಿತಿ ಕಲೆ ಹಾಕಿದರು.
ಮೂರು ದಿನಗಳ ಹಿಂದಷ್ಟೇ ನಾಡಕೋವಿಗೆ ಮುಕ್ತಿ
ಕೆಲ ತಿಂಗಳ ಹಿಂದೆ ಪತಿ&ಪತ್ನಿ ನಡುವೆ ಈ ರೀತಿ ಕಲಹ ಏರ್ಪಟ್ಟಿತ್ತು. ಆ ವೇಳೆ ಪತಿ ರಾಮಚಂದ್ರ, ಪತ್ನಿ ವಿನೋದಾ ಹಾಗೂ ಮಕ್ಕಳಿಗೆ ಕೋವಿ ತೋರಿಸಿ, ಅವರನ್ನು ಅಟ್ಟಾಡಿಸಿ ಬೆದರಿಸಿದ್ದ. ಈ ಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೋವಿಯನ್ನು ಮೂರು ತಿಂಗಳ ಅವಧಿಗೆ ಮುಟ್ಟುಗೋಲು ಹಾಕಲಾಗಿತ್ತು. ಮೂರು ದಿನಗಳ ಹಿಂದಷ್ಟೇ ಮುಟ್ಟುಗೋಲು ಹಾಕಿದ್ದ ಕೋವಿಯನ್ನು ಪತ್ನಿಯ ಅನುಮತಿ ಮೇರೆಗೆ ಬಿಡಿಸಿಕೊಂಡು ಮನೆಯಲ್ಲಿ ಇರಿಸಲಾಗಿತ್ತು. ಆದರೆ ಮತ್ತೆ ಪತಿ&ಪತ್ನಿಯರ ನಡುವೆ ಕಲಹ ಏರ್ಪಟ್ಟು ಇದೀಗ ಬ್ಬರ ಸಾವಿನಲ್ಲಿ ಅಂತ್ಯ ಕಂಡಿತು.