"ನನ್ನ ಸಾವಿಗೆ..." ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣು; ದುರಂತ ಅಂತ್ಯದ ಹಿಂದಿದೆ ಕಣ್ಣೀರಿನ ಕಥೆ | Suicide Case

ವಿಜಯವಾಣಿ (10)
Published on

Suicide Case: ನನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಆರೋಪಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ತಾಡೇಪಲ್ಲಿಯಲ್ಲಿ ವರದಿಯಾಗಿದೆ. ಸೆಲ್ಫಿ ವಿಡಿಯೋ ಮಾಡಿಟ್ಟು, ಸಾವಿಗೆ ಶರಣಾದ ಯುವಕನ ಹಿಂದೆ ಕಣ್ಣೀರಿನ ಕಥೆಯಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಂಗ್ರಹಿಸಿದ ವಿವರಗಳ ಪ್ರಕಾರ, ಮೃತನನ್ನು ತಾಡೇಪಲ್ಲಿ ಪಟ್ಟಣ ವ್ಯಾಪ್ತಿಯ ನೂಲಕಪೇಟೆಯ ಬ್ರಹ್ಮಯ್ಯ (30) ಎಂದು ಗುರುತಿಸಲಾಗಿದೆ. ಈತ ಸಿಸಿಟಿವಿ ಕ್ಯಾಮೆರಾ ಟೆಕ್ನಿಷಿಯನ್​ ಆಗಿ ಕೆಲಸ ಮಾಡಿಕೊಂಡಿದ್ದ. ಮಂಗಳಗಿರಿ ಟಿಡ್ಕೊದಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಮದುವೆಯಾದ ಬ್ರಹ್ಮಯ್ಯ, ಪತ್ನಿಯ ವರ್ತನೆಯಿಂದ ತೀರ ಬೇಸತ್ತು ಹೋಗಿದ್ದ. ಅತ್ತೆ-ಮಾವನೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿದ್ದ ಪತ್ನಿಯ ನಡುವಳಿಕೆ ಗಂಡನಿಗೆ ಕಿಂಚಿತ್ತು ಹಿಡಿಸುತ್ತಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ನಡುವೆ ಜಟಾಪಟಿ ನಡೆಯುತ್ತಿತ್ತು.

ಪತ್ನಿಯ ನಡೆಯಿಂದ ಬೇಸತ್ತು, ತನ್ನ ಸ್ವಂತ ಮನೆ ಬಿಟ್ಟು ಹೊರಬಂದ ಬ್ರಹ್ಮಯ್ಯ, ಉಂಡವಳ್ಳಿ ಅಮರಾವತಿ ರಸ್ತೆಯಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದ. ಇಲ್ಲಿಯೂ ಸದಾ ಫೋನ್‌ನಲ್ಲಿ ಮಾತನಾಡುತ್ತ ಕಾಲೆ ಕಳೆಯುತ್ತಿದ್ದ ಹೆಂಡತಿಯ ವರ್ತನೆ ಜಗಳಕ್ಕೆ ಕಾರಣವಾಯಿತು. ಈ ಮಧ್ಯೆ, ಆಷಾಢ ಮಾಸ ಬಂದಿದ್ದರಿಂದ ಪತ್ನಿಯನ್ನು ತನ್ನ ತವರಿಗೆ ಕಳುಹಿಸಿದ ಬ್ರಹ್ಮಯ್ಯ, ಅತ್ತ ತಂದೆ-ತಾಯಿಯೊಂದಿಗೆ ಜಗಳವಾಡಿದರೆ, ಇತ್ತ ಮೊಬೈಲ್​ನಲ್ಲೇ ಸಮಯ ಕಳೆಯುತ್ತಾಳೆ ಎಂದು ತೀರ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳವಾರ (ಜು.15) ರಾತ್ರಿ 9 ಗಂಟೆ ಸುಮಾರಿಗೆ ಸೆಲ್ಫಿ ವಿಡಿಯೋ ಮಾಡಿ, ನನ್ನ ಸಾವಿಗೆ ಹೆಂಡತಿಯೇ ಕಾರಣ ಎಂದು ಹೇಳುತ ನೇಣಿಗೆ ಕೊರಳೊಡ್ಡಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ತಡೆಪಲ್ಲಿ ಪೊಲೀಸರು ಭೇಟಿ ನೀಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪುತ್ರನ ಅಗಲಿಕೆಯಿಂದ ಕಣ್ಣೀರಿಟ್ಟ ಬ್ರಹ್ಮಯ್ಯ ಅವರ ತಾಯಿ, ಪತಿ ಸತ್ತು ಒಂದು ವರ್ಷದ ಬೆನ್ನಲ್ಲೇ ಮಗ ಕೂಡ ಸಾವಿಗೀಡಾಗಿದ್ದಾನೆ. ನನ್ನ ಮಗನ ಸಾವಿಗೆ ಕಾರಣರಾದ ನನ್ನ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net