488 ರೂಪಾಯಿಗೆ ಜೋಡಿ ಕೊಲೆ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ

arrested
Published on

ಮೈಸೂರು: ಹುಣಸೂರು ನಗರದ ಎಸ್​.ಎಸ್. ಸಾಮಿಲ್​ನಲ್ಲಿ ಜೂನ್​ 22ರಂದು ನಡೆದಿದ್ದ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಅಪ್ರಾಪ್ತ ವಯಸಿನ ವಯಸ್ಕರ ಸೇರಿದಂತೆ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ಧಾರೆ.

ಬಂಧಿತರನ್ನು ತೌಸಿಫ್​(30) ಎಂದು ಗುರುತಿಸಲಾಗಿದ್ದು, ಈಗ ಗಾಂಜಾ ಮಾರಾಟ ಮಾಡುತ್ತಿದ್ದ. ಅಪ್ರಾಪ್ತ ವಯಸ್ಕರನನ್ನು ಮೈಸೂರಿನಲ್ಲಿರುವ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಜೂನ್​ 22ರಂದು ಹಣದ ಆಸೆಗಾಗಿ ಮೂವರು ಆರೋಪಿಗಳು ಹುಣಸೂರಿನ ವಿಶ್ವೇಶ್ವರಯ್ಯ ಸರ್ಕಲ್​ನಲ್ಲಿರುವ ಎಸ್​.ಎಸ್​. ಸಾಮಿಲ್​ನ ಕಾವಲುಗಾರರಾದ ವೆಂಕಟೇಶ್​ ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂನನ್ನು ಹತ್ಯೆ ಮಾಡಿದ್ದರು.

ಹತ್ಯೆಯಾದ ಷಣ್ಮುಗ, ವೆಂಕಟೇಶ್​, ಬಂಧಿತ ಆರೋಪಿ ಅಭಿಷೇಕ್​
ಹತ್ಯೆಯಾದ ಷಣ್ಮುಗ, ವೆಂಕಟೇಶ್​, ಬಂಧಿತ ಆರೋಪಿ ಅಭಿಷೇಕ್​

ಹತ್ಯೆ ಬಳಿಕ ಮೃತರ ಜೇಬಿನಲ್ಲಿ ಸಿಕ್ಕ 488 ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು. ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅಭಿಷೇಕ್​ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಬಂಧಿತ ಆರೋಪಿ ಅಭಿಷೇಕ್​ ನೀಡಿದ ಸುಳಿವಿನ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ, ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net