ಅಂಬೇಡ್ಕರ್​ ಪ್ರತಿಮೆ ತೆರವು ಮಾಡಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಾಟ

BR Ambedkar
Published on

ಲಖನೌ: ಡಾ.ಬಿ.ಆರ್. ಅಂಬೇಡ್ಕರ್​ ಅವರ ಪ್ರತಿಮೆಯನ್ನು ತೆರವು ಮಾಡಲು ಮುಂದಾದ ಪೊಲೀಸ್​ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣ ಸಂಬಮಧ ಮೂವರು ಮಹಿಳೆಯರು ಸೇರಿದಂತೆ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್​ ಅಧಿಕಾರಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಾರಿ ಜಾಗದಲ್ಲಿ ನಿರ್ಮಾಣ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಭದೋಹಿ ಪೊಲೀಸ್​ ಠಾಣಾಧಿಕಾರಿ ಭುವನೇಶ್ವರ್​ ಕುಮಾರ್ ಪಾಂಡೆ ಮುಶಿಲಾತ್​ಪುರದ ಕೊತ್ವಾಲಿ ಪ್ರದೇಶದಲ್ಲಿ ಸರ್ಕಾರಿ ಕೊಳಕ್ಕಾಗಿ ನಿಗದಿಪಡಿಸಿದ್ದ ಜಾಗದಲ್ಲಿ ಅಲ್ಲಿನ ನಿವಾಸಿಗಳು ರಾತ್ರೋ ರಾತ್ರಿ ಅಂಬೇಡ್ಕರ್​ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

UP Police

ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರತಿಮೆಯನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು. ಆದರೆ, ಅಲ್ಲಿನ ನಿವಾಸಿಗಳು ಇದಕ್ಕೆ ವಿರೋಧಿಸಿದ್ದರು ಮತ್ತು ಪ್ರತಿಭಟಿಸಲು ಶುರು ಮಾಡಿದ್ದರು. ಆಗ ಅಧಿಕಾರಿಗಳ ತಂಡೆ ಪ್ರತಿಮೆಯನ್ನು ತೆರವು ಮಾಡಲು ಮುಂದಾದಾಗ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ಧಾರೆ.

ಪ್ರಕರಣ ಸಂಬಂಧ ಮೂವರು ಮಹಿಳೆಯರು ಸೇರಿದಂತೆ 11 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಷ್ಟು ಜನರನ್ನು ಬಂಧಿಸಲಾಗುವುದು. ಪರಾರಿಯಾಗಿರುವ ಇತರರಿಗಾಗಿ ಶೋಧ ಕಾರ್ಯ ನಡೆದಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭದೋಹಿ ಪೊಲೀಸ್​ ಠಾಣಾಧಿಕಾರಿ ಭುವನೇಶ್ವರ್​ ಕುಮಾರ್ ಪಾಂಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net