ಲಿವ್​-ಇನ್​-ರಿಲೇಶನ್​ಶಿಪ್​ನಲ್ಲಿದ್ದ ಅಪ್ರಾಪ್ತ ವಯಸ್ಕಳ ಹತ್ಯೆ ಮಾಡಿ ಪ್ರಿಯಕರ ಸಾವಿಗೆ ಶರಣು

Live In Relationship
Published on

ಅಹಮದಾಬಾದ್​: ಘಟನೆಯೊಂದರಲ್ಲಿ ಅಪ್ರಾಪ್ತ ವಯಸ್ಕ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಂದು ಪ್ರಯಕರ ನೇಣಿಗೆ ಶರಣಾಗಿರುವ ಘಟನ ಗುಜರಾತಿನ ನವಸಾರಿ ಜಿಲ್ಲೆಯ ಬಿಳಿಮೋರಾ ಎಂಬ ಪ್ರದೇಶದಲ್ಲಿ ನಡೆದಿದೆ.

ಮೃತರಿಬ್ಬರು ಕಳೆದ ಒಂದು ವರ್ಷದಿಂದ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದರು ಎಂದು ತಿಳಿದು ಬಂದಿದೆ. ಬಿಹಾರ ಮೂಲದವರಾದ ಪ್ರೇಮಿಗಳಿಬ್ಬರು ಕೆಲಸ ಅರಸಿ ಗುಜರಾತಿಗೆ ಬಂದಿದ್ದರು ಎಂದು ವರದಿಯಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಒಬ್ಬರು 26 ವರ್ಷದ ವ್ಯಕ್ತಿ ಹಾಗೂ ಆತನ ಅಪ್ರಾಪ್ತ ವಯಸ್ಕ ಪ್ರಿಯತಮೆ ಕೆಲಸ ಅರಸಿ ಬಿಹಾರದಿಂದ ಗುಜರಾತಿಗೆ ಬಂದಿದ್ದರು. ಪ್ರೇಮಿಗಳಿಬ್ಬರ ನಡುವೆ ವಿಚಾರ ಒಂದಕ್ಕೆ ಜಗಳ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರಿಯಕರ ತನ್ನ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ತಾನು ನೇನು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಮಾದಕವ್ಯಸನಿ

ಪ್ರೇಮಿಗಳಿಬ್ಬರು ಈ ಮೊದಲು ಮನೆ ಬಾಡಿಗೆಗೆ ಪಡೆಯುವ ಮುನ್ನ ತಮ್ಮಿಬ್ಬರಿಗೆ ಈಗಾಗಲೇ ಮದುವೆಯಾಗಿದೆ ಎಂದು ಮಾಲೀಕರ ಬಳಿ ಹೇಳಿದ್ದರು. ಮುಮದಿನ ವರ್ಷ ಈ ಇಬ್ಬರು ಮದುವೆಯಾಗಲು ಯೋಜನೆ ರೂಪಿಸಿದ್ದರು. ಮೃತ ಯುವಕ ಮಾದಕ ವ್ಯಸನಿಯಾಗಿದ್ದು, ಡ್ರಗ್ಸ್​ ಸೇವಿಸಿದ ಬಳಿಕ ವಿಚಿತ್ರವಾಗಿ ವರ್ತಿಸುತ್ತಿದ್ದ.

ಹಲವು ಬಾರಿ ತನ್ನ ಪ್ರಿಯತಮೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ, ಎಂದು ಆತನ ಸಂಬಂಧಿಕರು ವಿಚಾರಣೆ ವೇಳೆ ತಿಳಿಸಿದ್ದಾರೆ. ಘಟನೆ ನಡೆದ ದಿನವೂ ಆರೋಪಿಯೂ ಡ್ರಗ್ಸ್​ ಸೇವಿಸಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಪ್ರೇಮಿಗಳಿಬ್ಬರ ನಡುವೆ ವಿಚಾರ ಒಂದಕ್ಕೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತ ಆಕೆಯನ್ನು ಕೊಂದು ಬಳಿಕ ತಾನು ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net