ಬೆಂಗಳೂರಿನ ಮೊದಲ ಕಮ್ಯುನಿಟಿ ಮಾಲ್ ಗ್ಲೋಬಲ್ ಡಿವಿನಿಟಿ ಅನಾವರಣ

Mall Inaugration
Published on

ಬೆಂಗಳೂರು: ಎಲ್ಲಾ ವರ್ಗದವರಿಗೂ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರಿನ ಮೊದಲ ಕಮ್ಯುನಿಟಿ ಮಾಲ್ "ಗ್ಲೋಬಲ್ ಡಿವಿನಿಟಿ" ಶನಿವಾರ ಅನಾವರಗೊಂಡಿದೆ.

ಮೈಸೂರು ರಸ್ತೆಯಲ್ಲಿರುವ ವಿಶ್ವದರ್ಜೆಯ ಮಾಲ್ಅನ್ನು ಖ್ಯಾತ ಚಿತ್ರನಟ ಕಿಚ್ಚ ಸುದೀಪ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದರಾದ ಡಿ.ಕೆ. ಸುರೇಶ್ ಉದ್ಘಾಟನೆ ಮಾಡಿದ್ದಾರೆ.

ಪ್ರತಿಷ್ಠಿತ ಕಂಪನಿಗಳ ಮಳಿಗೆಯಿಂದ ಬಟ್ಟೆ, ದಿನಸಿ, ಡಿಜಿಟಲ್ ಮಳಿಗೆ, ಪಿವಿಆರ್ ಸಿನಿಮಾ, ಫುಡ್ ಕೋರ್ಟ್ ಹಾಗೂ ಪ್ಲೇ ಝೋನ್ ಸೇರಿದಂತೆ ಎಲ್ಲಾ ವರ್ಗದವರಿಗೂ ಸಲ್ಲುವ ಮಾಲ್ ಇದಾಗಿದೆ.

Mall Inaugration

ಆಶೀರ್ವಾದ ಸಹಕಾರ ಜತೆಗಿರಲಿ

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಅನೇಕ ಮಾಲ್ ಇವೆ. ಇದು ಮೊದಲ ಕಮ್ಯುನಿಟಿ ಮಾಲ್. ಇಲ್ಲಿ ಮನರಂಜನೆ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿ 7 ಸಿನಿಮಾ ಸ್ಕ್ರೀನ್ ಇವೆ. ಜನಸಾಮಾನ್ಯರಿಗೆ ಅನುಕೂಲ ಆಗಲೂ ಈ ಮಾಲ್ ಆರಂಭಿಸಲಾಗಿದೆ. ನಿಮ್ಮ ಆಶೀರ್ವಾದ ಸಹಕಾರ ನಮ್ಮ ಜತೆಗಿರಲಿ. ನನಗೆ ವೈಯಕ್ತಿಕ ಜೀವನ ಹಾಗೂ ರಾಜಕೀಯವಾಗಿ ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಟ ಕಿಚ್ಚ ಸುದೀಪ್ ಮಾತನಾಡಿ, ಮನರಂಜನೆ ಕ್ಷೇತ್ರಕ್ಕೆ ನಿಮ್ಮ ಪ್ರಯತ್ನಕ್ಕೆ ಅಭಿನಂದನೆ, ನಿಮ್ಮ ಪ್ರಯತ್ನ ಹೇಗೆ ಮುಂದುವರಿಯಲಿ ಎಂದು ಶುಭ ಹಾರೈಸಿದ್ಧಾರೆ.

ಉದ್ದೇಶ ಚೆನ್ನಾಗಿದೆ

ನಟ ರವಿಚಂದ್ರನ್ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ಉದ್ದೇಶ ಚೆನ್ನಾಗಿರಬೇಕು. ಇವರ ಉದ್ದೇಶ ಚೆನ್ನಾಗಿದೆ. ಇದು ಯಶಸ್ವಿಯಾಗಲಿದೆ. ಐಶ್ವರ್ಯ ಅವರನ್ನು ಇಂದು ನೋಡಿದೆ. ಆಕೆ ತಂದೆಗೆ ತಕ್ಕ ಮಗಳು. ಈ ಮಾಲ್ ಗೆ ಡಿವಿನಿಟಿ ಎಂಬ ಹೆಸರು ಉತ್ತಮವಾಗಿದೆ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಪ್ರಯತ್ನ. ನಿಮಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ಧಾರೆ.

ಇದೇ ಸಮಯದಲ್ಲಿ ಅತಿಥಿಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಾಡೋ ಪ್ಲೇ ಉತ್ಪನ್ನವನ್ನು ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net