ಬೀಜಿಂಗ್: ಸೂಪರ್ಮಾರ್ಕೆಟ್ನಿಂದ ತಂದ ಮೂನ್ಕೇಕ್ ಒಳಗೆ ಬೇರೊಬ್ಬ ವ್ಯಕ್ತಿಯ ಹಲ್ಲು ಪತ್ತೆಯಾಗಿರುವ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ಚೀನಾದ ಮಹಿಳೆಯೊಬ್ಬರು ಪೂರ್ವ ಚೀನಾದ ಜಿಯಾಂಗ್‌ಸುವಿನ ಚಾಂಗ್‌ಝೌನಲ್ಲಿರುವ ಸೂಪರ್‌ಮಾರ್ಕೆಟ್ ಸ್ಯಾಮ್ಸ್ ಕ್ಲಬ್‌ನಿಂದ ಮೂನ್ಕೇಕ್ ಅನ್ನು ಖರೀದಿಸಿದ್ದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ಮಾಲೀಕನಿದ್ದ ಆಂಬ್ಯುಲೆನ್ಸ್ ಹಿಂಬಾಲಿಸಿದ ಶ್ವಾನ; 27 ಸೆಕೆಂಡಿರುವ ವಿಡಿಯೋಗೆ ಮೆಚ್ಚುಗೆ ಮಹಾಪೂರ
30 ಯುವಾನ್ ಕೊಟ್ಟು ಮೂನ್ಕೇಕ್ ಅನ್ನು ಖರೀದಿಸಿ ಮನೆಗೆ ಕೊಂಡೊಯ್ದಿದ್ದಾರೆ. ಬಳಿಕ ಮನೆ ಮಂದಿ ಅದನ್ನು ತಿನ್ನುವಾಗ ಒಬ್ಬರಿಗೆ ಅನೀರಿಕ್ಷಿತವಾಗಿ ಮನುಷ್ಯನ ಹಲ್ಲು ಪತ್ತೆಯಾಗಿದೆ. ಅದನ್ನು ನೋಡಿ ಕುಟುಂಬದ ಸದಸ್ಯರು ಗಾಬರಿಗೊಂಡಿದ್ದಾರೆ. ಮೂನ್ಕೇಕ್ನ ಫೋಟೋ ಮತ್ತು ವಿಡಿಯೋವನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅರ್ಧ ತಿಂದ ಪೇಸ್ಟ್ರಿಯ ಮೇಲೆ ಟಿಶ್ಯೂ ಪೇಪರ್ ತುಂಡಿನ ಮೇಲೆ ಹಲ್ಲು ಇರುವುದು ಕಾಣಬಹುದಾಗಿದೆ.
ನಾನ್ವೆಜ್ ತುಂಬಿರುವ ಮೂನ್ಕೇಕ್ನಲ್ಲಿ ಪತ್ತೆಯಾಗಿರುವ ಹಲ್ಲು ನಮ್ಮ ಕುಟುಂಬದ ಯಾವುದೇ ಸದಸ್ಯರದಲ್ಲ ಎಂದು ಆ ಮಹಿಳೆ ಹೇಳಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಮಾಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಸಂಬಂಧಿತ ಸರ್ಕಾರಿ ಇಲಾಖೆಯು ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲಾಗುತ್ತಿದೆ. ಅದರಲ್ಲೊಬ್ಬರು ಮೂನ್ಕೇಕ್ ನಾನ್ವೆಜ್ ಅನ್ನು ಮಾತ್ರ ಒಳಗೊಂಡಿರುತ್ತದೆ ಎಂದುಕೊಂಡಂರೆ ಕ್ಯಾಲ್ಸಿಯಂ ಅನ್ನು ಸಹ ನೀಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇದೇ ರೀತಿಯ ಘಟನೆ ಈ ಹಿಂದೆ ಮಧ್ಯಪ್ರದೇಶದಲ್ಲೂ ಕಂಡುಬಂದಿತ್ತು. ತಮ್ಮ ಮಗುವಿನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಡೆದ ಚಾಕೊಲೇಟ್‌ನಲ್ಲಿ ನಾಲ್ಕು ಹಲ್ಲುಗಳು ಪತ್ತೆಯಾಗಿತ್ತು. (ಏಜೆನ್ಸೀಸ್)
ತಂದೆಯ ಜತೆಗಿನ ಭಾವನಾತ್ಮಕ ಸಂಬಂಧದ ವಿಡಿಯೋ ಹಂಚಿಕೊಂಡ ದುಬೈ ರಾಜಕುಮಾರಿ; ನೆಟ್ಟಿಗರು ಹೇಳಿದ್ದೇನು ಗೊತ್ತಾ?