ಮಾಲೀಕನಿದ್ದ ಆಂಬ್ಯುಲೆನ್ಸ್​​ ಹಿಂಬಾಲಿಸಿದ ಶ್ವಾನ; 27 ಸೆಕೆಂಡಿರುವ ವಿಡಿಯೋಗೆ ಮೆಚ್ಚುಗೆ ಮಹಾಪೂರ

Untitled-design-2024-09-14T192307.536-1
Published on

ನವದೆಹಲಿ: ಶ್ವಾನಗಳನ್ನು ನಿಷ್ಠಾವಂತ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಈ ಮಾತಿಗೆ ಸೂಕ್ತ ಎಂಬಂತಿದೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ. ಅನಾರೋಗ್ಯದ ಕಾರಣ ತನ್ನ ಮಾಲೀಕನನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್​​​​​​ ಹಿಂದೆ ನಾಯಿಯೊಂದು ಓಡುತ್ತಿರುವುದನ್ನು ನೋಡಬಹುದಾಗಿದೆ. ಇದು ಕೊಲಂಬಿಯಾದಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ.

ಟೋನೊ ಎಂಬ ಹೆಸರಿನ ಈ ನಾಯಿಯ ಮಾಲೀಕರು ಅಲೆಸ್ಸಾಂಡ್ರೊ ತೀವ್ರ ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ಟೋನೊ ಹಿಂಬಾಲಿಸಿದೆ. ಹುಷಾರಿಲ್ಲದ ಟೋನೋ ಸುಮಾರು 40 ಕಿಲೋಮೀಟರ್ ದೂರ ಆಂಬ್ಯುಲೆನ್ಸ್ ಅನ್ನು ಹಿಂಬಾಲಿಸಿದೆ. ವೈರಲ್​ ವಿಡಿಯೋದಲ್ಲಿ ಟೋನೊ ರಸ್ತೆಯಲ್ಲಿ ಆಂಬ್ಯುಲೆನ್ಸ್​​ ಹಿಂದೆ ಓಡುತ್ತಿರುವ ದೃಶ್ಯವನ್ನು ಕಾಣಬಹುದು. ಹಿಂದೆ ಬೈಕ್​ನಲ್ಲಿ ಬರುತ್ತಿದ್ದವರು ಈ ವಿಡಿಯೋ ಸೆರೆಹಿಡಿದಿರುವುದನ್ನು ಗಮನಿಸಬಹುದಾಗಿದೆ. ಟೋನೊ ಹಿಂಬಾಲಿಸುತ್ತಿರುವುದನ್ನು ಕಂಡ ಆಂಬ್ಯುಲೆನ್ಸ್ ಸಿಬ್ಬಂದಿ ಮಾಲೀಕರ ಬಳಿ ಹೋಗಲು ಟೋನೊಗೆ ಅವಕಾಶ ನೀಡಿದರು.

27 ಸೆಕೆಂಡ್​ ಇರುವ ಈ ವಿಡಿಯೋವನ್ನು 13 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. ಟೋನೊಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ನಿಜವಾದ ನಿಷ್ಠೆ, ಇದನ್ನು ನೋಡುವಾಗ ನನ್ನ ಕಣ್ಣಲ್ಲಿ ನೀರು ಬಂತು. ಸಾಕುಪ್ರಾಣಿಗಳು ಮತ್ತು ಅವುಗಳ ಮಾಲೀಕರ ನಡುವಿನ ವಿಶೇಷ ಬಾಂಧವ್ಯದ ಅಂತಹ ಸುಂದರ ಕ್ಷಣವನ್ನು ನಾನು ಎಂದಿಗೂ ನೋಡಿಲ್ಲ ಹೀಗೆ ನೆಟ್ಟಿಗರು ಹಲವು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net