ಕೋಡಿ ಪಂಚಾಯಿತಿಯಲ್ಲಿ ಬೃಹತ್ ಆಧಾರ್ ಮೇಳ

kota-2
Published on

ಕೋಟ: ಸರ್ಕಾರಿ ಸೌಲಭ್ಯಗಳನ್ನು ಪಡೆಯುವಾಗ ಆಧಾರ್ ಸಮಸ್ಯೆ ಎದುರಿಸುತ್ತಿರುವುದನ್ನು ಕಾಣುತ್ತೇವೆ. ಹಾಗಾಗಿ ಆಧಾರ್ ಕಾರ್ಡನ್ನು ಆಗಾಗ ಅಪ್‌ಡೇಟ್ ಮಾಡಬೇಕು ಎಂದು ಭಾರತೀಯ ಅಂಚೆ ಇಲಾಖೆ ಕುಂದಾಪುರ ವಿಭಾಗದ ಮಾರ್ಕೆಟಿಂಗ್ ವಿಭಾಗ ಜೀವನ್ ಕುಮಾರ್ ಹೇಳಿದರು.

ಬುಧವಾರ ಕೋಡಿ ಪಂಚಾಯಿತಿಯಲ್ಲಿ ಭಾರತೀಯ ಅಂಚೆ ವಿಭಾಗ, ಕೋಡಿ ಗ್ರಾಪಂ, ಸಮನ್ವಯ ಸಂಜೀವಿನಿ ಒಕ್ಕೂಟ, ಏಜುಕೇರ್ ಕೋಟ ನೇತೃತ್ವದಲ್ಲಿ ಕೋಟದ ಪಂಚವರ್ಣ ಸಂಘಟನೆ ಸಂಯೋಜನೆಯೊಂದಿಗೆ ಉಚಿತವಾಗಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಹಾಗೂ ಪಿಎಂ ವಿಶ್ವಕರ್ಮ ಯೋಜನೆ, ಆಟೋ ಚಾಲಕರಿಗೆ ಇ ಕಾರ್ಡ್, ಮೀನುಗಾರರ ಕಾರ್ಡ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಅಂಚೆ ವಿಭಾಗದ ಮಹೇಂದ್ರ ಕುಮಾರ್, ಕೋಡಿ ಗ್ರಾಪಂ ಸದಸ್ಯರಾದ ಪ್ರಭಾಕರ್ ಮೆಂಡನ್, ಕೃಷ್ಣ ಪೂಜಾರಿ ಪಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲಕ್ಷ್ಮೀ, ಸಮನ್ವಯ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದೀಪಾ ಖಾರ್ವಿ, ಪಂಚವರ್ಣ ಯುವಕ ಮಂಡಲ ಉಪಾಧ್ಯಕ್ಷ ದಿನೇಶ್ ಆಚಾರ್ ಮಣೂರು, ಕೋಡಿ ಶಾಲೆ ಮುಖ್ಯಶಿಕ್ಷಕಿ ಸಂಪಾ ಟೀಚರ್ ಉಪಸ್ಥಿತರಿದ್ದರು.

ಪಂಚವರ್ಣ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯಿತಿ ಸದಸ್ಯ ಕೃಷ್ಣ ಪೂಜಾರಿ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net