ಕೋಟ: ಸಮಾಜಸೇವೆಯೇ ಜೀವಾಳವಾಗಿರಿಸಿಕೊಂಡು ತನ್ನ ಚೌಕಟ್ಟಿನೊಳಗೆ ನಿರಂತರ ಕಾರ್ಯಕ್ರಮ ನೀಡುವ ಪಂಚವರ್ಣದ ಕಾರ್ಯವೈಕರಿ ನಿಜಕ್ಕೂ ಮೆಚ್ಚುವಂಥದ್ದು ಎಂದು ಹಿರಿಯ ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಹೇಳಿದರು.

ಮಂಗಳವಾರ ಕೋಟದ ಪಂಚವರ್ಣ ಕಚೇರಿಯಲ್ಲಿ ಸದಸ್ಯ ಗಣೇಶ್ ಕಾಸನಗುಂದು ಅವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟುಹಬ್ಬದ ಅಂಗವಾಗಿ ಬಾಲ್ಯದ ಶಿಕ್ಷಕರಾದ ಜೂಲಿಯ ಟೀಚರ್, ಸಹಾಯಕಿ ಜಲಜಾ ಶೇಖರ್, ನಿವೃತ್ತ ಶಿಕ್ಷಕ ಕೊಯ್ಕೂರು ಸೀತಾರಾಮ ಶೆಟ್ಟಿ ಅವರನ್ನು ನಿವೃತ್ತ ಶಿಕ್ಷಕ ಎಂ.ಎನ್.ಮಧ್ಯಸ್ಥ ಗೌರವಿಸಿದರು.
ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೋಟದ ಸಾಮಾಜಿಕ ಕಾರ್ಯಕರ್ತ ಕೆ.ಶ್ರೀಕಾಂತ್ ಶೆಣೈ, ಪಂಚವರ್ಣ ಮಹಿಳಾ ಮಂಡಲ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್‌ಉಪಸ್ಥಿತರಿದ್ದರು.
ಪಂಚವರ್ಣದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿ. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಸ್ತಾವಿಸಿದರು. ಮಹಿಳಾ ಮಂಡಲ ಸಂಚಾಲಕಿ ಸುಜಾತಾ ಬಾಯರಿ ನಿರೂಪಿಸಿ. ಮಹಿಳಾ ಮಂಡಲ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.