ಹೃತಿಕ್ ರೋಷನ್ 'ಫೈಟರ್' ಟ್ರೈಲರ್ ಟೈಮ್ ಫಿಕ್ಸ್.. ಯಾವಾಗ?

hruthick
Published on

ಮುಂಬೈ: ಬಾಲಿವುಡ್ ಸ್ಟಾರ್ ಹೀರೋ ಹೃತಿಕ್ ರೋಷನ್ ಅವರ ಇತ್ತೀಚಿನ ಚಿತ್ರ 'ಫೈಟರ್'. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದರೆ, ಅನಿಲ್ ಕಪೂರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಾರ್ ಮತ್ತು ಪಠಾಣ್ ಖ್ಯಾತಿಯ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಗಣರಾಜ್ಯೋತ್ಸವದ ಉಡುಗೊರೆಯಾಗಿ ಜ.25 ರಂದು ಚಿತ್ರ ತೆರೆಗೆ ಬರಲಿದೆ. ರಿಲೀಸ್​ಗೆ ಇನ್ನು 12 ದಿನಗಳು ಮಾತ್ರ ಬಾಕಿ ಇದ್ದು, ನಿರ್ಮಾಪಕರು ಪ್ರಚಾರದ ವೇಗ ಹೆಚ್ಚಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಆದರೆ ಈ ಸಿನಿಮಾದ ಟ್ರೈಲರ್ ಯಾವಾಗ ಬರುತ್ತೆ ಎಂದು ಪ್ರೇಕ್ಷಕರು ಕಾಯುತ್ತಿರುವಾಗಲೇ ಸಖತ್ ಅಪ್​ಡೇಟ್ ಕೊಟ್ಟಿದ್ದಾರೆ. ಈ ಚಿತ್ರದ ಟ್ರೇಲರ್ ಅನ್ನು ಸಂಕ್ರಾಂತಿ ಉಡುಗೊರೆಯಾಗಿ ಜ.15 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರದಲ್ಲಿ ಹೃತಿಕ್ ರೋಷನ್ ಫೈಟರ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಮತ್ತು ದೇಶಭಕ್ತಿಯ ಅಂಶಗಳ ಮೇಳೈಸಿರುವ ಈ ಚಿತ್ರ ಭಾರೀ ವೆಚ್ಚದಲ್ಲಿ ತಯಾರಾಗುತ್ತಿದೆ.

ಬಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net