

buttermilk | ಬೇಸಿಗೆಯ ಸಂದರ್ಭದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರೋದ್ರಿಂದಾಗಿ ದೇಹವು ಅತೀ ಹೆಚ್ಚು ಪಾನೀಯಗಳನ್ನು ಕೇಳುತ್ತದೆ. ಆದರೆ ನೀವು ಈ ತಂಪು ಪಾನೀಯಗಳ ಬದಲಾಗಿ ನಿಮ್ಮ ಮನೆಯಲ್ಲೇ ನೈಸರ್ಗಿಕವಾಗಿ ಮಸಾಲ ಮಜ್ಜಿಗೆಯನ್ನು ತಯಾರಿಸಿ ಕುಡಿಯುವುದರಿಂದ ದೇಹವು ಆರೋಗ್ಯಕರವಾಗಿ ತಂಪಾಗಿರಲು ಸಹಾಯವಾಗುತ್ತದೆ. ಹಾಗಾದ್ರೆ ಮನೆಯಲ್ಲೇ ರುಚಿಕರ ಹಾಗೂ ಆರೋಗ್ಯಕರ ಮಜ್ಜಿಗೆ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಶರಬತ್ತು, ನಿಂಬೆ ಹಣ್ಣಿನ ಜ್ಯೂಸ್ ಮತ್ತು ಲಸ್ಸಿಯಂತಹ ಅನೇಕ ಪಾನೀಯಗಳು ಜನಪ್ರಿಯವಾಗಿದ್ದರೂ, ಊಟದ ನಂತರ ಒಂದು ಲೋಟ ಮಜ್ಜಿಗೆ ಕುಡಿಯುವುದು ಉತ್ತಮ ಅಭ್ಯಾಸವಾಗಿದೆ. ಮೊಸರಿನಿಂದ ತಯಾರಿಸಿದ ಮಜ್ಜಿಗೆ ನಿಮ್ಮನ್ನು ತಕ್ಷಣವೇ ತಂಪಾಗಿಸುವುದಲ್ಲದೆ, ಜೀರ್ಣಕ್ರಿಯೆಗೂ ಸಹ ಸಹಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪ್ಯಾಕೇಜ್ ಮಾಡಿದ ಮಜ್ಜಿಗೆ ನಿಮಗೆ ಅಂಗಡಿಗಳಲ್ಲಿ ಲಭ್ಯವಿದ್ದರೂ ಸಹ ಮನೆಯಲ್ಲಿ ತಾಜಾ ಮಜ್ಜಿಗೆಯನ್ನು ತಯಾರಿಸುವುದು ಆರೋಗ್ಯಕ್ಕೆ ಒಳ್ಳೆಯದು. ನೀವು ಮನೆಯಲ್ಲೇ ಸುಲಭವಾಗಿ ಮಜ್ಜಿಗೆಯನ್ನು ತಯಾರಿಸಲು ಈ ಸಲಹೆಗಳನ್ನು ಅನುಸರಿಸಿ.
5) ಒಂದು ಲೋಟಕ್ಕೆ ಹಾಕಿಕೊಂಡು, ಮೇಲ್ಭಾಗಕ್ಕೆ ಸ್ವಲ್ಪ ತಾಜಾ ಕೊತ್ತಂಬರಿ ಸೊಪ್ಪನ್ನು ಹಾಕಿ ಕುಡಿಯಿರಿ.
4) ಎರಡು ಕಪ್ ತಣ್ಣನೆಯ ನೀರನ್ನು ಹಾಕಿ ಎಲ್ಲವನ್ನೂ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.
3) ಹೆಚ್ಚುವರಿ ಸುವಾಸನೆಗಾಗಿ ತಾಜಾ ಕೊತ್ತಂಬರಿ ಮತ್ತು ಪುದೀನ ಎಲೆಗಳನ್ನು ಮಿಶ್ರಣ ಮಾಡಿ.
2) ಅರ್ಧ ಚಮಚ ಉಪ್ಪು, ಅರ್ಧ ಚಮಚ ಹುರಿದ ಜೀರಿಗೆ ಮತ್ತು ಮೆಣಸಿನ ಕಾಯಿಯನ್ನು ಸೇರಿಸಿ.
1) ಒಂದು ಬಟ್ಟಲಿನಲ್ಲಿ ಒಂದು ಕಪ್ ಮೊಸರು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.