

Rashmika Mandanna : ನಟಿ ರಶ್ಮಿಕಾ ಮಂದಣ್ಣ ಅವರನ್ನು ಅವರ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಕನ್ನಡ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಅವರು ನಂತರ ತಮಿಳು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗ ಬಿಟ್ಟು ಬಹಳ ವರ್ಷಗಳೇ ಕಳೆದಿವೆ. ಅವರು ಮತ್ತೆ ಕನ್ನಡ ಚಿತ್ರರಂಗದತ್ತ ಮರಳುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಇಲ್ಲಿ ಅವರನ್ನು ಪ್ರೀತಿಸುವ ಅಭಿಮಾನಿಗಳು ಎಷ್ಟಿದ್ದಾರೋ ಅಷ್ಟೇ ದ್ವೇಷಿಸುವವರೂ ಕೂಡ ಇದ್ದಾರೆ. ಇಂದು (ಏಪ್ರಿಲ್ 5) ರಶ್ಮಿಕಾ ಹುಟ್ಟುಹಬ್ಬವಾಗಿದೆ. ಅವರಿಗೆ 28 ವರ್ಷ ಮುಗಿದು 29 ತುಂಬಿದ್ದು, ಇಷ್ಟು ಸಣ್ಣ ವಯಸ್ಸಿನಲ್ಲಿ ರಶ್ಮಿಕಾ ಅವರು ದೊಡ್ಡ ಯಶಸ್ಸು ಕಂಡಿರೋದು ಎಲ್ಲರಿಗೂ ತಿಳಿದಿರೋ ವಿಷಯ.
ರಶ್ಮಿಕಾ ಅವರು ಪುಷ್ಪ 2 ಮತ್ತು ಚಾವಾ ದಂತಹ ದೊಡ್ಡ ಹಿಟ್ ಚಿತ್ರಗಳನ್ನು ನಿರಂತರವಾಗಿ ನೀಡುತ್ತಾ ಬರುತ್ತಿದ್ದಾರೆ. ಇವುಗಳಲ್ಲಿ ಪುಷ್ಪ 2 ಚಿತ್ರ 1800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಯುವಜನರ ಕನಸಿನ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಇಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದನ್ನು ಆಚರಿಸಲು ಅವರು ವಿದೇಶಕ್ಕೆ ತೆರಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ರಶ್ಮಿಕಾ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭಾಷಗಳನ್ನು ಕೋರುತ್ತಿದ್ದಾರೆ.
(ಏಜೆನ್ಸೀಸ್)
ರಶ್ಮಿಕಾ ಅವರು ಭಾರತ ಚಿತ್ರರಂಗದ ಹಲವು ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಶ್ಮಿಕಾ ಅವರ ವ್ಯಕ್ತಿತ್ವದಿಂದ ಅವರ ಬಳಿ ಅನೇಕ ಅವಕಾಶಗಳು ರಶ್ಮಿಕಾ ಅವರನ್ನು ಹುಡುಕಿಕೊಂಡು ಬರುತ್ತವೆ. ಒಟ್ಟಾರೆಯಾಗಿ ನಟಿ ರಶ್ಮಿಕಾ ಅವರ ಆಸ್ತಿ 66 ಕೋಟಿ ರೂಪಾಯಿಗಳಷ್ಟಿದೆ ಎಂದು ಹೇಳಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅವರು 1 ಸಿನಿಮಾದಲ್ಲಿ ನಟಿಸಲು 10 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿರುವುದು ಗಮನಾರ್ಹ.