

Viral vedeo | ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರ ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ಅಂದಹಾಗೆ ಇತ್ತೀಚೆಗೆ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಅದು ಜನರನ್ನು ಬೆಚ್ಚಿ ಬೀಳಿಸುವಂತಿದೆ. ಒಬ್ಬ ಹುಡುಗಿ ಟಿ-ಶರ್ಟ್ ಧರಿಸಿ ಕೈಯಲ್ಲಿ ಕಾರ್ಡ್ಬೋರ್ಡ್ ಹಿಡಿದು ವಾಹನಗಳು ಓಡಾಡುವ ರಸ್ತೆ ಮಧ್ಯೆ ನಿಂತು ಶ್ರೀಮಂತ ವರನಿಗಾಗಿ ಹುಡುಕಾಟ ನಡೆಸಿದ್ದಾಳೆ.
ಹೌದು ಅನ್ನಾ ಅವರಿನಾ ಎಂಬ ಹೆಸರಿನ ಯುವತಿ, ನಾನು ಶ್ರೀಮಂತ ಗಂಡನನ್ನು ಹುಡುಕುತ್ತಿದ್ದೇನೆ ಎಂದು ರಸ್ತೆ ಮಧ್ಯೆ ಓಡಾಡಿದ್ದಾಳೆ. ಈ ವಿಡಿಯೋದಲ್ಲಿ ಆಕೆ ತನ್ನ ಕೈಯಲ್ಲಿ ದೊಡ್ಡ ಕಾರ್ಡ್ ಬೋರ್ಡ್ ಹಿಡಿದಿರುವುದನ್ನು ಗಮನಿಸಬಹುದು. ಅದರ ಮೇಲೆ "ಶ್ರೀಮಂತ ಗಂಡನನ್ನು ಹುಡುಕುತ್ತಿದ್ದೇನೆ'' ಎಂದು ಬರೆಯಲಾಗಿದೆ. ಇದನ್ನೂ ಓದಿದ ಅಲ್ಲಿನ ಸ್ಥಳೀಯರು ಗೊಂದಲಕ್ಕೊಳಗಾಗಿದ್ದಾರೆ. ಹೈ ಹೀಲ್ಸ್ ಧರಿಸಿ ಅವಳು ನಡೆಯುತ್ತಿದ್ದ ರೀತಿ, ಕೇವಲ ಟಿ-ಶರ್ಟ್ ಧರಿಸಿ ಬೀದಿಗಳಲ್ಲಿ ಆಕೆ ನಡೆಯುತ್ತಿದ್ದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರ ಆಸ್ತಿ ಎಷ್ಟಿದೆ ಗೊತ್ತಾ? Rashmika
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಇಲ್ಲಿಯವರೆಗೆ 41 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಆದರೆ ಆಕೆ ಈ ವಿಡಿಯೋವನ್ನು ಮನರಂಜನಾ ಉದ್ದೇಶಕ್ಕಾಗಿ ಮಾಡಿರುವುದಾಗಿ ಗೊತ್ತಾಗುತ್ತದೆ. ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಇನ್ನೂ ಹಲವು ವಿಡಿಯೋಗಳಿವೆ. ಈ ವಿಡಿಯೋ ಬಗ್ಗೆ ಹೇಳುವುದಾದರೆ, ಲಕ್ಷಾಂತರ ಜನರು ಇದನ್ನು ಲೈಕ್ ಮಾಡಿ ಬೇರೆ ಕಡೆ ಹಂಚಿಕೊಂಡಿದ್ದಾರೆ ಮತ್ತು ಸಾಕಷ್ಟು ಕಾಮೆಂಟ್ಗಳು ಸಹ ಬಂದಿವೆ. ಕಿರಣ್ ಮೆಹ್ರಾರಂತಹ ಶ್ರೀಮಂತ ವ್ಯಕ್ತಿಯನ್ನು ಹುಡುಕಿ ಅವನನ್ನು ನಿಮ್ಮ ಗಂಡನನ್ನಾಗಿ ಮಾಡಿಕೊಳ್ಳಿ ಎಂದು ಒಬ್ಬರು ಬರೆದಿದ್ದಾರೆ. ನಾನು ಶ್ರೀಮಂತನಲ್ಲ, ಆದರೆ ನಿನ್ನಂತಹ ಸುಂದರ ಹುಡುಗಿಯನ್ನು ನನ್ನ ಗೆಳತಿಯನ್ನಾಗಿ ಮಾಡಿಕೊಳ್ಳಬೇಕೆಂದು ಮುಸ್ತಫಾ ಎಂಬಾತ ಬರೆದಿದ್ದಾರೆ.