Summer : ಬೇಸಿಗೆ ಕಾಲವು ಆರಂಭವಾಗಿದ್ದು, ತಪಮಾನ ಭಾರಿ ಏರಿಕೆಯಾಗುತ್ತಿದೆ. ಬೇಸಿಗೆಯಲ್ಲಿ ಸ್ಮಾರ್ಟ್ಪೋನ್ಗಳು, ಲ್ಯಾಪ್ಟಾಪ್ಗಳು ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಸಾಧನಗಳು ಬೇಗನೆ ಬಿಸಿಯಾಗುತ್ತವೆ. ನಿರಂತರ ಬಳಕೆಯಿಂದ ಪರಿಸ್ಥಿತಿ ಹದಗೆಡುತ್ತದೆ. ಅಲ್ಲದೆ, ಕೆಲವೊಮ್ಮೆ ಅವು ತುಂಬಾ ಬಿಸಿಯಾಗುವುದರಿಂದ ಅವುಗಳನ್ನು ಆಫ್ ಮಾಡಬೇಕಾಗುತ್ತದೆ. ಹೀಗಾಗಿ, ನೀವು AC ಇಲ್ಲದೆಯೂ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ತಂಪಾಗಿಡಲು ಸಾಧ್ಯವಾಗುತ್ತದೆ ಎಂಬುದು ನೋಡೋಣ.

ಎಲೆಕ್ಟ್ರಾನಿಕ್ ಸಾಧನಗಳು ಹಿಟ್ ಕಡಿಮೆ ಮಾಡಲು ಕೆಲ ಸಲಹೆಗಳು ಇಲ್ಲಿವೆ..
ಗಾಳಿ ಬರುವ ಸ್ಥಳದಲ್ಲಿ ಇರಿಸಿ
ಬೇಸಿಗೆಯಲ್ಲಿ ಸ್ಮಾರ್ಟ್ಪೋನ್ಗಳು, ಲ್ಯಾಪ್ಟಾಪ್ಗಳು ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಸಾಧನಗಳು ಬಳಸುವಾಗ ಅದಷ್ಟು ಗಾಳಿ ಬರುವ ಸ್ಥಳದಲ್ಲಿ ಇರಿಸಿ. ಅವುಗಳನ್ನು ಗೋಡೆ ಅಥವಾ ಇತರ ವಸ್ತುಗಳ ಹತ್ತಿರ ಇಡಬೇಡಿ. ಇದರೊಂದಿಗೆ, ಪ್ರಿಂಟರ್‌ಗಳು, ಕಂಪ್ಯೂಟರ್‌ಗಳು, ರೂಟರ್‌ಗಳು ಮತ್ತು ಇತರ ಸಾಧನಗಳಲ್ಲಿ ವೆಂಟ್‌ಗಳನ್ನು ಒದಗಿಸಲಾಗುತ್ತದೆ. ಶಾಖವನ್ನು ಬಿಡುಗಡೆ ಮಾಡಲು ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಿ. ಸಾಧನವನ್ನು ಮುಚ್ಚಿದ ಜಾಗದಲ್ಲಿ ಇಡುವುದರಿಂದ ಅದು ಬಿಸಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಶಾಖದಿಂದ ರಕ್ಷಿಸಿ
ಕೆಲವು ಜನರು ಕಿಟಕಿಗಳಿಂದ ಕೂತು ಕೆಲಸ ಮಾಡಲು ಇಚ್ಚಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ನೇರವಾಗಿ ಬಿಸಿಲಿನ ಕಿರಣಗಳಿಗೆ ಒಡ್ಡಬೇಡಿ. ನೆನಪಲ್ಲಿಡಿ, ಎಲೆಕ್ಟ್ರಾನಿಕ್ ಸಾಧನಗಳನ್ನು ಯಾವಾಗಲೂ ತಂಪಾದ ಮತ್ತು ನೆರಳಿನ ಸ್ಥಳದಲ್ಲಿ ಇರಿಸಿ. ಅಲ್ಲದೆ, ಶಾಖದಿಂದ ತಣ್ಣಗಾಗಿಸಲು ಮನೆಯ ಫ್ಯಾನ್ ಕೆಳಗೆ ಇಡಬಹುದು.
ಒಂದರಮೇಲೊಂದು ಜೋಡಿಸಬೇಡಿ
ಸಾಮಾನ್ಯವಾಗಿ ಬಳಕೆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಬೇಗ ಅಂತಹ ಪರಿಸ್ಥಿತಿಯಲ್ಲಿ, ಸಾಧನಗಳನ್ನು ಎಂದಿಗೂ ಒಂದರ ಮೇಲೊಂದು ಇಡಬೇಡಿ. ಇದರಿಂದಾಗಿ, ಸಾಧನಗಳು ಬೇಗನೆ ಬಿಸಿಯಾಗುತ್ತವೆ ಮತ್ತು ಅವುಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಒಂದರ ಮೇಲೊಂದು ಇಡಬೇಡಿ. ಅವು ಬಿಸಿಯಾಗದಂತೆ ರಕ್ಷಿಸಲು ಕೂಲಿಂಗ್ ಪ್ಯಾಡ್‌ಗಳನ್ನು ಸಹ ಬಳಸಬಹುದು.
ತುಂಬಾ ಬಿಸಿಯಾದಾಗ ಆಪ್ ಮಾಡಿ
ಬೇಸಿಯಲ್ಲಿ ಸಾಮಾನ್ಯವಾಗಿ ತಪಮಾನ ಹೆಚ್ಚಿಗುತ್ತಲೇ ಇರತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿರಂತರ ಬಳಕೆಯ ನಂತರ ಎಲೆಕ್ಟ್ರಾನಿಕ್ ಸಾಧನಗಳು ಬಿಸಿಯಾಗಬಹುದು. ಮೇಲಿನ ವಿಧಾನಗಳನ್ನು ಅನುಸರಿಸಿದ ನಂತರವೂ ಸಾಧನವು ತಣ್ಣಗಾಗದಿದ್ದರೆ, ಅದನ್ನು ಆಫ್ ಮಾಡಿ. ಸ್ವಲ್ಪ ಸಮಯ ಕಾಯಿರಿ ಮತ್ತು ಅದು ತಣ್ಣಗಾದ ನಂತರ ಮತ್ತೆ ಬಳಸಿ.(ಏಜೆನ್ಸೀಸ್)
WhatsApp ನಲ್ಲಿಯೇ Instagram ನಂತೆ ರೀಲ್ಸ್ ನೋಡಬಹುದು; ಹೇಗಂತೀರಾ, ಈ ಸಿಂಪಲ್ ಟ್ರಿಕ್ಸ್ ಬಳಸಿ..