More

    ಯುದ್ಧದಲ್ಲಿ ರಷ್ಯಾ ಕಳೆದುಕೊಂಡ ಯೋಧರೆಷ್ಟು..? ಇಲ್ಲಿದೆ ಯೂಕ್ರೇನ್​ ನೀಡಿದ ಮಾಹಿತಿ

    ಕೀವ್​: ಇಡೀ ಪ್ರಪಂಚವೇ ಕಾಣುತ್ತಿರುವ ರಷ್ಯಾ-ಯೂಕ್ರೇನ್​ ಯುದ್ಧದಲ್ಲಿ ಸೋತವರಾರು..ಗೆದ್ದವರಾರು ಎಂಬ ಗೊಂದಲದಲ್ಲಿದೆ. ಇಡೀ ದೇಶವೇ ನಾಶವಾಗಿ ನಿರ್ನಾಮವಾಗಿರುವ ಯೂಕ್ರೇನ್​ ಸೋತಿದೆಯೇ ಅಥವಾ ಸಾವಿರಾರು ಯೋಧರನ್ನು ಕಳೆದುಕೊಂಡ ರಷ್ಯಾ ಮೇಲು ಗೈ ಸಾಧಿಸಿದೆಯೇ ಎಂಬುದು ಗೊಂದಲಮಯವಾಗಿರುವುದಂತೂ ನಿಜ.

    ಸದ್ಯಕ್ಕೇ ಯೂಕ್ರೇನ್​ ರಷ್ಯಾದ ಎಷ್ಟು ಸೇನೆಯನ್ನು ನಾಶ ಮಾಡಿದ್ದೇವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ರಷ್ಯಾದ 176ವಿಮಾನಗಳು, 153 ಹೆಲಿಕಾಪ್ಟರ್​, 2162 ಸಶಸ್ತ್ರ ಸಿಬ್ಬಂದಿ ವಾಹಕ, 397 ಫಿರಂಗಿಗಳು, 69 ವಿಮಾನ ಯುದ್ಧಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿದೆ.

    ಒಟ್ಟಾರೆ ರಷ್ಯಾ ಬರೋಬ್ಬರಿ 21,200 ಯೋಧರನ್ನು ಕಳೆದುಕೊಂಡಿದ್ದು, 834 ಯುದ್ಧ ಟ್ಯಾಂಕರ್​ಗಳು ಕೂಡ ನಾಶಗೊಳಿಸಿದ್ದೇವೆ ಎಂದು ಹೇಳಿದೆ.

    ಫೆ.24ರಿಂದ ಉಭಯ ರಾಷ್ಟ್ರಗಳು ಯುದ್ಧ ಆರಂಭಿಸಿದ್ದು, ಸದ್ಯ ಸದ್ಯ ಸಣ್ಣ ರಾಷ್ಟ್ರವಾಗಿದ್ದರೂ ಯೂಕ್ರೇನ್​ ಹೋರಾಟಕ್ಕೆ ಇಡೀ ವಿಶ್ವವೇ ಪ್ರಶಂಶಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts