ಐಪಿಎಲ್​ನಲ್ಲಿ ಆಡಲು ಅವಕಾಶ ಕೇಳಿದ್ರಾ ನಟ ಆಮೀರ್ ಖಾನ್​!

Amir Khan
Published on

ನವದೆಹಲಿ: ಐಪಿಎಲ್​ನಲ್ಲಿ ಆಡಲು ಅವಕಾಶವಿದೆಯಾ ಎಂದು ತನ್ನ ಅಭಿಮಾನಿಗಳಿಗೆ ಕೇಳಿರುವ ಬಾಲಿವುಡ್​ ನಟ ಆಮೀರ್ ಖಾನ್​ ಅವರ ವಿಡಿಯೋ ಈಗ ವೈರಲ್​ ಆಗುತ್ತಿದೆ.

ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಾಕಿಕೊಂಡಿರುವ ಅಮಿರ್​ ಖಾನ್​, ಕ್ರಿಕೆಟ್​ ಆಡುತ್ತಾ, ನನಗೂ ಐಪಿಎಲ್​​ನಲ್ಲಿ ಚಾನ್ಸ್​ ಇದಿಯಾ ಎಂದು ಹೇಳಿದ್ದಾರೆ.

28ರ ನಂತರ ನಾನು ನಿಮಗೊಂದು ಕಥೆಯನ್ನು ಹೇಳುತ್ತೇನೆ. ತುಂಬಾ ಉತ್ಸುಕನಾಗಿದ್ದೇನೆ ಎಂದೂ ಬರೆದುಕೊಂಡಿದ್ದಾರೆ.ಕ್ರೀಡೆಯಾಧಾರಿತ ಲಗಾನ್​ ಮತ್ತು ದಂಗಲ್​​ ಸಿನಿಮಾಗಳಲ್ಲಿ ನಟಿಸುವ ಮೂಲಕ ಆಮೀರ್ ಖಾನ್​ ಕ್ರೀಡೆಯ ಮಹತ್ವ ಅವರಿಗಿರುವ ಅದಭಿರುಚಿಯ ಬಗ್ಗೆ ತೋರಿಸಿಕೊಟ್ಟಿದ್ದಾರೆ.

ಸದ್ಯ ಆಮೀರ್ ಖಾನ್​ ನಟನೆಯ ಲಾಲ್​ ಸಿಂಗ್​ ಚಡ್ಡಾ ತೆರೆಗೆ ಬರಲು ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net