More

    ಸಿನಿಮಾದಲ್ಲಿ ಸಿಗರೇಟ್​ ಸೇದುವುದು ತಪ್ಪಾದರೆ ಇದಕ್ಕೆ ಸರ್ಕಾರ ತೆರಿಗೆ ಹಣ ಕೇಳೋದು ಸರಿನಾ ಹೀಗೆಂದು ಉಪೇಂದ್ರ ಟ್ವೀಟ್​ ಮಾಡಿದ್ದು ಏಕೆ?

    ಬೆಂಗಳೂರು: ಇದ್ದಿದ್ದು ಇದ್ದ ಹಾಗೆ ಹೇಳುವ ನಟ ಉಪೇಂದ್ರ ಅವರು ಸಾಮಾಜಿಕ ಕಳಕಳಿಯ ಕೆಲವು ವಿಷಯವನ್ನು ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

    ಹೌದು… ರಿಯಲ್​ ಸ್ಟಾರ್​ ಉಪೇಂದ್ರ ಅವರು ನಟರೊಬ್ಬರು ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಟ್ವಿಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

    ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಇದರಿಂದ ಬರೋ ತೆರಿಗೆ ಹಣಕ್ಕಾಗಿ ಸರ್ಕಾರ ಕೊಟ್ಟಿರೋ ಅನುಮತಿ ಸರಿನಾ ಎಂದು ಪ್ರಶ್ನಿಸಿದ್ದಾರೆ.


    ಶ್… ಯಾರೂ ಮಾತನಾಡಬಾರದು !

    ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ… ಯಾವತ್ತೂ ಅಪ್ಪ ಸರಿ… ಮಕ್ಕಳು ತಪ್ಪು ! ಎಂದು ಹೇಳಿಕೊಂಡಿದ್ದಾರೆ.

    ಕೆಟ್ಟ ವಸ್ತುಗಳು ಬಳಕೆ ಮಾಡಬಾರದು ಅಂದ ಮೇಲೆ ಅವುಗಳ ತೆರಿಗೆ ಹಣಕ್ಕಾಗಿ ಕಾಯುವುದು ಸರಿಯೇ, ರಾಜಕೀಯ ನಾಯಕರು ಏನು ಮಾಡಿದರೂ ಸರಿ ಆದರೆ ಪ್ರಜೆಗಳು ಮಾಡುವಂತಿಲ್ಲ ಎಂಬ ಒಳಾರ್ಥದಲ್ಲಿ ರಾಜಕೀಯ ವ್ಯವಸ್ಥೆಗೆ ಸವಾಲನ್ನು ಹಾಕಿದ್ದಾರೆ.

    ಇಲ್ಲಿ ಸರ್ಕಾರ ಏನೂ ಬೇಕಾದರೂ ಮಾಡಬಹುದು, ಜನರು ಅದನ್ನು ಪಾಲಿಸಬೇಕಷ್ಟೇ, ಅದನ್ನು ಪ್ರಶ್ನಿಸುವಂತಿಲ್ಲ ಯಾರೂ ಈ ಬಗ್ಗೆ ಮಾತನಾಡಬಾರದು ಎಂದು ಕೂಡ ಹೇಳಿದ್ದಾರೆ.

    ತಂಬಾಕು ಉತ್ಪನ್ನದ ಜಾಹಿರಾತಿನಲ್ಲಿ ನಟ ಅಕ್ಷಯ್​ಕುಮಾರ್ ನಟಿಸಲಿದ್ದಾರೆ.ಎಂಬ ವಿಷಯ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಹಾಗೂ ಟ್ವಿಟಿಗರು ವ್ಯಾಪಕ ಟೀಕೆ ಮಾಡಿದ್ದರು. ಇದರಿಂದ ಕ್ಷಮೆಯಾಚಿಸಿ ಜಾಹಿರಾತಿನಿಂದ ತಾನು ಹೊರ ಬರುತ್ತಿರುವುದಾಗಿ ಅಕ್ಷಯ್​ ಕುಮಾರ್​ ಘೋಷಿಸಿಕೊಂಡಿದ್ದರು.

    ಇದೀಗ ಇದೇ ವಿಷಯವನ್ನು ಪ್ರಸ್ತಾಪಿಸಿರುವ ನಟ ಉಪೇಂದ್ರ ಅವರು ಇದರ ಬೇರು ಯಾವುದು ಎಂಬುದರ ಜಾಡು ಹಿಡಿಯಬೇಕಿದೆ. ಬಳಕೆಗೆ ಅವಕಾಶ ಕೊಡುವ ಸರ್ಕಾರವೇ ಇದನ್ನು ಸಂಪೂರ್ಣ ನಿಷೇಧಿಸಲಿ ಎಂಬುದು ಅವರ ಆಶಯವಾಗಿರಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts