Elephants : ಯಾವುದೇ ಪ್ರಾಣಿಗಳಾಗಲಿ ತನ್ನನ್ನು ಬೇಟೆಯಾಡುವ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳಲು ಏನಾದರೂ ತಂತ್ರವನ್ನು ಬಳಸುತ್ತವೆ. ಅದೇ ರೀತಿ ತಾಯಿ ಪ್ರಾಣಿಗಳು ತಮ್ಮ ಮರಿಗಳನ್ನು ಕಾಪಾಡಿಕೊಳ್ಳಲು ತಮ್ಮ ಪ್ರಾಣ ತ್ಯಾಗಕ್ಕೂ ರೆಡಿಯಾಗಿರುತ್ತವೆ. ಅಲ್ಲದೆ, ಎಂಥದ್ದೇ ಘೋರ ಸನ್ನಿವೇಶವನ್ನು ಕೂಡ ಎದುರಿಸಲು ಮುಂದಾಗುತ್ತವೆ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ವಿಡಿಯೋ.
ಕಾಡಿನ ರಾಜ ಸಿಂಹ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆನೆಗಳು ಸಹ ಕೆಲವೊಮ್ಮೆ ಸಿಂಹಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಕೆಲವೊಮ್ಮೆ ದೊಡ್ಡ ಆನೆಗಳು ತಮ್ಮ ಬೃಹತ್ ದೇಹದ ಕಾರಣದಿಂದ ತಮ್ಮ ಸೊಂಡಿಲಿನಿಂದ ದಾಳಿ ಮಾಡಿ ಹೇಗೋ ತಪ್ಪಿಸಿಕೊಳ್ಳುತ್ತವೆ. ಆದರೆ, ಚಿಕ್ಕ ಆನೆಗಳು ಸಿಂಹಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಅದಕ್ಕಾಗಿಯೇ ಸಿಂಹಗಳು ಸುತ್ತುವರೆದಾಗ ತಮ್ಮ ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಆನೆಗಳು ಒಂದು ತಂತ್ರವನ್ನು ಬಳಸುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆನೆಗಳು ಗುಂಪಿನಲ್ಲಿ ಪ್ರಯಾಣಿಸುವಾಗ, ಸಿಂಹಗಳು ದಾಳಿ ಮಾಡಲು ಪ್ರಯತ್ನಿಸುತ್ತವೆ. ಈ ವೇಳೆ ತಾಯಿ ಆನೆಗಳು ತಮ್ಮ ಮರಿಗಳನ್ನು ಮಧ್ಯದಲ್ಲಿ ಇರಿಸಿ ರಕ್ಷಣಾತ್ಮಕ ಉಂಗುರದಂತೆ ಅವುಗಳ ಸುತ್ತಲೂ ನಿಲ್ಲುತ್ತವೆ. ಈ ಮೂಲಕ ಸಿಂಹದ ದಾಳಿಯಿಂದ ತಮ್ಮ ಮರಿಗಳನ್ನು ರಕ್ಷಣೆ ಮಾಡುತ್ತವೆ. ಈ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
సింహాలు చుట్టుముట్టినప్పుడు ఏనుగుల వ్యూహం
సింహాల కంటే ఏనుగులు చాలా పెద్దగా ఉంటాయి. కానీ ఏనుగు ఒంటరిగా చిక్కితే మూడు, నాలుగు కలిసి దాడి చేయడం ద్వారా దాన్ని సింహాలు చంపుతాయి. ఒకవేళ గజరాజులు గుంపుగా ఉంటే గున్న ఏనుగులని సింహాలు లక్ష్యంగా చేసుకుంటాయి. అలాంటి సందర్భంలో ఏనుగులు… pic.twitter.com/8kaNEG0PmK
— ChotaNews App (@ChotaNewsApp) February 21, 2025
ಆನೆಗಳು ತಮ್ಮ ಮರಿಗಳನ್ನು ರಕ್ಷಣೆ ಮಾಡುವ ವಿಡಿಯೋವನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)
ಆಫ್ರಿಕನ್ ಮಗುವಿಗೆ ಜನ್ಮ ನೀಡಿದ ಅಮೆರಿಕನ್ ಯುವತಿ: ಇದಕ್ಕೆ ಆ ಒಂದು ಮಿಸ್ಟೇಕ್ ಕಾರಣವಂತೆ! Wedding Photographer
ಸಮುದ್ರ ದಡಕ್ಕೆ ಬಂದ ದೇವರ ಮೀನು: ಇದು ಜಗತ್ತಿನ ವಿನಾಶದ ಮುನ್ಸೂಚನೆಯಂತೆ! ವಿಡಿಯೋ ವೈರಲ್… Doomsday Fish