ಕಾಸರಗೋಡು: ಬಿರುಸಿನ ಮಳೆಗೆ ವರ್ಕಾಡಿ ಮಜೀರ್‌ಪಳ್ಳ ಧರ್ಮನಗರ ನಿವಾಸಿ ಅಬ್ದುಲ್ ಖಾದರ್ ಎಂಬುವರ ಹೆಂಚು ಹಾಸಿನ ಮನೆಯ ಮಹಡಿ ಕುಸಿದು ಬಿದ್ದಿದೆ. ಅಪಾಯ ಅರಿತು ಮನೆಯಲ್ಲಿದ್ದವರು ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಭಾರಿ ದುರಂತ ತಪ್ಪಿದೆ.
ಅಬ್ದುಲ್ ಖಾದರ್ ಅವರ ಏಳು ಮಂದಿಯನ್ನೊಳಗೊಂಡ ಕುಟುಂಬ ಇಲ್ಲಿ ವಾಸಿಸುತ್ತಿದ್ದು, ಮಹಡಿಯ ಒಂದು ಪಕ್ಕಾಸು ಮುರಿಯುವ ಹಂತದಲ್ಲಿರುವುದನ್ನು ಮನಗಂಡು ಮನೆಯವರನ್ನು ಬಾಯಿಕಟ್ಟೆಯ ಸಂಬಂಧಿಕರಲ್ಲಿಗೆ ಕರೆದೊಯ್ದು ವಾಪಸಾಗುತ್ತಿದ್ದಂತೆ ಮನೆ ಮಹಡಿ ಸಂಪೂರ್ಣ ಕುಸಿದು ಬಿದ್ದಿದೆ. ಅಪಾಯದ ಮುನ್ಸೂಚನೆ ಅರಿತು ಮುಂಜಾಗ್ರತೆ ಕೈಗೊಂಡ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಮನೆಯೊಳಗಿನ ಗೃಹೋಪಕರಣಗಳು ಸಂಪೂರ್ಣ ಹಾನಿಗೀಡಾಗಿವೆ.