

ಥಾಣೆ: ಉಚಿತವಾಗಿ ಟೀ ಕೊಡಲಿಲ್ಲ ಎಂಬ ಕಾರಣಕ್ಕೆ ಅಂಗಡಿಯವನನ್ನು ಯುವಕರ ಗುಂಪೊಂದು ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸ್ಥಳೀಯ ಉಲ್ಲಾಸ್ನಗರದ ಚೌಕ್ನಲ್ಲಿ ಕನ್ಹಯ್ಯಾ ಟೀ ಅಂಗಡಿ ಇದ್ದು, ಕೌಂಟರ್ನಲ್ಲಿ ಅಂಗಡಿಯ ಮಾಲೀಕ ಪ್ರಸ್ ಸಚ್ ದೇವ್ ಕುಳಿತಿದ್ದರು. ಆಗ ಬಿಟ್ಟು ಎಂಬ ಯುವಕ ಟೀ ಕುಡಿಯಲು ಬಂದು ತನಗೆ ಉಚಿತವಾಗಿ ಟೀ ಬೇಕು ಎಂದಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಆತನಿಗೆ ಚಹಾ ನೀಡಲು ನಿರಾಕರಿಸಿದ್ದು, ಈ ವೇಳೆ ಯುವಕ ಅಂಗಡಿಯಿಂದ ಹೊರನಡೆದಿದ್ದಾನೆ.
ಸ್ವಲ್ಪ ಸಮಯದ ನಂತರ ಮತ್ತೆ ಅಂಗಡಿಗೆ ತನ್ನ ಇಬ್ಬರ ಸಹಚರರೊಂದಿಗೆ ಯುವಕ ಬಂದಿದ್ದು, ಈ ವೇಳೆ ಹೋಟೆಲ್ ಮಾಲೀಕನ ಸಹೋದರ ಅಜ್ಜು ಸಚ್ದೇವ್ ಕೌಂಟರ್ನಲ್ಲಿ ಕುಳಿತಿದ್ದನು. ಆಗ ಮೂವರು ಸೇರಿಕೊಂಡು ಫ್ರೀ ಚಹಾ ನೀಡುವಂತೆ ಕೇಳಿದ್ದು, ಅದಕ್ಕೆ ಅಜ್ಜು ಕೂಡ ನಿರಾಕರಿಸಿದ್ದಾನೆ. ಇದರಿಂದ ತೀವ್ರ ಕೋಪಗೊಂಡ ಮೂವರು, ಆ ವ್ಯಕ್ತಿಗೆ ಥಳಿಸಿದ್ದು ಘಟನೆಯ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸುದ್ದಿ ತಿಳಿದ ಬಳಿಕ ಪೊಲೀಸರು ಬಿಟ್ಟು ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್)