ಆಸ್ಪತ್ರೆಯೊಳಗೇ ನಾಗರಹಾವಿನ ಮರಿಗಳು ಪತ್ತೆ; ಸರ್ಜಿಕಲ್ ವಾರ್ಡ್ ಬಂದ್, ರೋಗಿಗಳ ಸ್ಥಳಾಂತರ!

Cobra
ಸಾಂದರ್ಭಿಕ ಚಿತ್ರ
Published on

ತಿರುವನಂತಪುರ: ಆಸ್ಪತ್ರೆಯೊಂದರಲ್ಲಿ ಸುಮಾರು ಹತ್ತು ನಾಗರಹಾವಿನ ಮರಿಗಳು ಪತ್ತೆಯಾದ್ದರಿಂದ ಸರ್ಜಿಕಲ್ ವಾರ್ಡ್ ಬಂದ್ ಮಾಡಲಾಗಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಇಲ್ಲಿನ ಪೆರಿಂತಲಮನ್ನ ಎಂಬಲ್ಲಿನ ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್ ವಾರ್ಡ್​ನಲ್ಲಿ ಮೂರು ದಿನಗಳಲ್ಲಿ ಹತ್ತು ನಾಗರಹಾವಿನ ಮರಿಗಳು ಪತ್ತೆಯಾದ್ದರಿಂದ ರೋಗಿಗಳನ್ನು ಆಸ್ಪತ್ರೆಯ ಇನ್ನೊಂದು ಭಾಗಕ್ಕೆ ಸ್ಥಳಾಂತರ ಮಾಡಿ ವಾರ್ಡ್​ ಬಾಗಿಲು ಮುಚ್ಚಲಾಗಿದೆ. ರೋಗಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ.

ವಾರ್ಡ್​ಗೆ ಸಮೀಪದಲ್ಲಿ ದಟ್ಟವಾದ ಪೊದೆಗಳಿರುವುದಲ್ಲದೆ, ವಾರ್ಡ್​ ನೆಲದಲ್ಲಿನ ಟೈಲ್ಸ್​ ಕಿತ್ತುಹೋಗಿದ್ದು, ಅವುಗಳ ಎಡೆಯಲ್ಲಿ ಹಾವಿನ ಮರಿಗಳು ಅವಿತುಕೊಳ್ಳುವಂತಾಗಿರುವುದೇ ಈ ಅವಸ್ಥೆಗೆ ಕಾರಣ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಣ್ಣೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ಜತೆಗಿದ್ದ ತಾಯಿ ಹಾವಿನ ಕಡಿತಕ್ಕೆ ಒಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net