ಸರತಿ ಸಾಲಿನಲ್ಲಿ ಬನ್ನಿ ಎಂದು ಹೇಳಿದ್ದೇ ತಪ್ಪಾಯ್ತು!; ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೈದ ರೋಗಿ

Untitled design - 2023-10-25T103944.633
Published on

ಕೇರಳ: ವೈದ್ಯರನ್ನು ಭೇಟಿಯಾಗಲು ಸರತಿ ಸಾಲಿನಲ್ಲಿ ಬನ್ನಿ, ಪದೇ ಪದೇ ಮುಂದೆ ಬರಲು ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಮಹಿಳಾ ರೋಗಿಯೊಬ್ಬರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ವರದಿಯಾಗಿದೆ.

ವೈದ್ಯರನ್ನು ಭೇಟಿಯಾಗಲು ಸರತಿ ಸಾಲಿನಲ್ಲಿ ಬರಲು ಹೇಳಿದ್ದಕ್ಕೆ ಕೆರಳಿದ ಮಹಿಳೆ ರೋಗಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ 45 ವರ್ಷದ ಬೀನಾಮೋಳ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಣಿಕ್ಕರ ನಿವಾಸಿ ವಿದ್ಯಾತಿಲಕ್ ವಿರುದ್ಧ ಸದ್ಯ ಪೆರೂರ್ಕಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಫ್‌ಐಆರ್‌ ಪ್ರಕಾರ, ಆರೋಪಿಯು ವೈದ್ಯರನ್ನು ಭೇಟಿ ಮಾಡಲು ಸರತಿ ಸಾಲಿನಲ್ಲಿ ಹಲವಾರು ಬಾರಿ ಮುಂದೋಗಲು ಪ್ರಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಬಲವಂತವಾಗಿ ತಡೆದ ಆಸ್ಪತ್ರೆ ಸಿಬ್ಬಂದಿ ಬೀನಾಮೋಲ್ ಅವರ ಮೇಲೆ ಮಹಿಳೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 353 (ಸಾರ್ವಜನಿಕ ನೌಕರನ ಕರ್ತವ್ಯ ನಿರ್ವಹಣೆಯನ್ನು ತಡೆಯಲು ಹಲ್ಲೆ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಕೂಡಲೇ ಮಹಿಳೆ ಸ್ಥಳದಿಂದ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net