More

    ಮತ್ತೊಮ್ಮೆ ಕನ್ನಡದಲ್ಲಿ ಬಾಬಿ ಸಿಂಹ ; ರಘು ಕೋವಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ತಮಿಳು ನಟ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಮಲಯಾಳಂ ಚಿತ್ರಗಳಲ್ಲೂ ನಟಿಸಿರುವ ತಮಿಳಿನ ಖ್ಯಾತ ನಟ ಬಾಬಿ ಸಿಂಹ, ಕಳೆದ ವರ್ಷ ‘777 ಚಾರ್ಲಿ’ ಮೂಲಕ ಕನ್ನಡದಲ್ಲೂ ಡೆಬ್ಯೂ ಮಾಡಿದ್ದರು. ನಿರ್ದೇಶಕ ಕಿರಣ್ ರಾಜ್ ಮತ್ತು ನಟ ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಮೂಡಿಬಂದಿದ್ದ ‘777 ಚಾರ್ಲಿ’ ವಿಶೇಷ ಪಾತ್ರದಲ್ಲಿ ಗಮನ ಸೆಳೆದಿದ್ದರು ಬಾಬಿ. ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಕನ್ನಡ ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

    ಇದನ್ನೂ ಓದಿ : ಬಿಗ್​​​​ ಬಾಸ್‌ ಮನೆಯಲ್ಲಿ ಶುರುವಾಯ್ತು ಲವ್​ ಸ್ಟೋರಿ; ನಾವಿಬ್ಬರು ಅಧಿಕೃತವಾಗಿ ಪ್ರೇಮಿಗಳು ಎಂದ ಮೈಕಲ್​​​..!

    ಮತ್ತೊಮ್ಮೆ ಕನ್ನಡದಲ್ಲಿ ಬಾಬಿ ಸಿಂಹ ; ರಘು ಕೋವಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ತಮಿಳು ನಟ

    ರಘು ಕೋವಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಹಂಶಲೇಖ ಅವರ ಕಥಾ ಕಣಜದಿಂದ ಚಿತ್ರರಂಗಕ್ಕೆ ಪರಿಚಿತರಾದ ರಘು, ಬರಹಗಾರರಾಗಿ ಗುರುತಿಸಿಕೊಂಡಿದ್ದರು. ‘ಕೃಷ್ಣಲೀಲಾ’ ಚಿತ್ರಕ್ಕೆ ಅತ್ಯುತ್ತಮ ಕಥೆ ರಾಜ್ಯಪ್ರಶಸ್ತಿಯೂ ಒಲಿದುಬಂತಿತ್ತು. ಆ ಬಳಿಕ ರಾಜೇಂದ್ರ ಸಿಂಗ್ ಬಾಬು, ಎಸ್.ಎಸ್. ರಾಜಶೇಖರ್, ಕೆ.ವಿ.ರಾಜು. ಶಶಾಂಕ್, ಉಪೇಂದ್ರ ಜತೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದು, ಇದೀಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಟೈಟಲ್ ಇನ್ನಷ್ಟೇ ರಿವೀಲ್ ಆಗಬೇಕಿದ್ದು, ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ.

    ಇದನ್ನೂ ಓದಿ : ಹುಲಿ ಉಗುರು ಪ್ರಕರಣ: ನಟ ದರ್ಶನ್​, ವಿನಯ್​ ಗುರೂಜಿ ವಿರುದ್ಧ ದೂರು ದಾಖಲು

    ಮತ್ತೊಮ್ಮೆ ಕನ್ನಡದಲ್ಲಿ ಬಾಬಿ ಸಿಂಹ ; ರಘು ಕೋವಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ತಮಿಳು ನಟ

    ‘ದಿಲ್‌ಮಾರ್’ ಚಿತ್ರದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿರುವ ರಾಮ್, ಅದು ರಿಲೀಸ್‌ಗೂ ಮುನ್ನವೇ ಈ ಚಿತ್ರದ ಹೀರೋ ಆಗಿದ್ದಾರೆ. ಸದ್ಯ ಅವರ ಪಾತ್ರವಾಗಲಿ ಅಥವಾ ಬಾಬಿ ಸಿಂಹ ಪಾತ್ರವಾಗಲಿ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಗುಟ್ಟಾಗಿಟ್ಟಿದೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ‘ಯುವರತ್ನ’, ‘ರಾಜಕುಮಾರ’ ಖ್ಯಾತಿಯ ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts