More

    ಪ್ಯಾನ್ ಇಂಡಿಯಾ ಇನಾಮ್ದಾರ್ ; ಸಂದೇಶ್​ ಶೆಟ್ಟಿ ನಿರ್ದೇಶನದಲ್ಲಿ ಚಿರಶ್ರೀ, ರಜತ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸುತ್ತಿರುವ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ‘ಇನಾಮ್ದಾರ್’. ಇತ್ತೀಚೆಗಷ್ಟೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ‘ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ ಇನಾಮ್ದಾರ್ ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ, ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ ಸಂಘರ್ಷದ ಕಥೆ. ಚಿತ್ರಕ್ಕೆ ಕಪ್ಪು ಸುಂದರಿಯ ಸುತ್ತ ಎಂಬ ಅಡಿಬರಹವಿದೆ. ಬೆಳಗಾವಿ, ಕುಂದಾಪುರ, ಚಾಮರಾಜನಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾ ಇದೇ ತಿಂಗಳ 27ರಂದು ರಿಲೀಸ್ ಮಾಡಲಿದ್ದೇವೆ’ ಎಂದು ನಿರ್ದೇಶಕ ಸಂದೇಶ್ ಮಾಹಿತಿ ನೀಡಿದರು.

    ಇದನ್ನೂ ಓದಿ : ಪಾರ್ಟಿಯಿಂದ ಹೊರಬರುವಾಗ ಎಡವಿದ ಅಮೀರ್, ಎಣ್ಣೆ ಮತ್ತಿನಲ್ಲಿ ತೇಲಾಡುತ್ತಿದ್ದಾರೆಂದು ಕಾಮೆಂಟ್​ ಮಾಡಿದ ನೆಟ್ಟಿಗರು..!

    ಪ್ಯಾನ್ ಇಂಡಿಯಾ ಇನಾಮ್ದಾರ್ ; ಸಂದೇಶ್​ ಶೆಟ್ಟಿ ನಿರ್ದೇಶನದಲ್ಲಿ ಚಿರಶ್ರೀ, ರಜತ್​

    ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ‘ಕಾಳಿಂಗ’ ಎಂಬ ಪಾತ್ರದಲ್ಲಿ ನಟಿಸಿದ್ದು, ‘ಕಾಡಿನ ನಾಯಕನ ಪಾತ್ರ. ತುಂಡುಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ’ ಎಂದು ಹೇಳಿಕೊಂಡರು. ನಾಯಕ ರಂಜನ್ ಛತ್ರಪತಿ ಇಲ್ಲಿ ಇನಾಮ್ದಾರ್ ಕುಟುಂಬದ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ನಾಯಕಿಯಾಗಿ ಕಪ್ಪು ಸುಂದರಿ ಪಾತ್ರದಲ್ಲಿ ಚಿರಶ್ರೀ ಅಂಚಿನ್ ಕಾಣಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ : ಅನ್​ಲಾಕ್​ ಆಯಿತು ‘ಮೂಡ್ಸ್​ ಆಫ್​ ರಾಘವ’ ; ಮಿಲಿಂದ್​, ರೇಚೆಲ್ ನಟಿಸುತ್ತಿರುವ ಚಿತ್ರ

    ಪ್ಯಾನ್ ಇಂಡಿಯಾ ಇನಾಮ್ದಾರ್ ; ಸಂದೇಶ್​ ಶೆಟ್ಟಿ ನಿರ್ದೇಶನದಲ್ಲಿ ಚಿರಶ್ರೀ, ರಜತ್​

    ಉಳಿದಂತೆ ಎಂ.ಕೆ.ಮಠ, ರಘು ಪಾಂಡೇಶ್ವರ, ಚಿತ್ರಕಲಾ, ಥ್ರಿಲ್ಲರ್ ಮಂಜು, ಶರತ್ ಲೋಹಿತಾಶ್ವ, ಅವಿನಾಶ್, ಎಸ್ತರ್ ನರೊನಾ, ಪ್ರಶಾಂತ್ ಸಿದ್ದಿ, ಸಂಜು ಬಸಯ್ಯ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮುರಳಿ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts