ಸಾಧಕ ವಿದ್ಯಾರ್ಥಿನಿಗೆ ಸನ್ಮಾನ

kon
Published on

ಕೊಕ್ಕರ್ಣೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ‌್ಯಾಂಕ್ ಪಡೆದ ಪೂರ್ವಿ ಎಂ.ರಾವ್ ಅವರನ್ನು ಅಮೃತ ಭಾರತಿ ಟ್ರಸ್ಟ್ ವತಿಯಿಂದ ಮುದ್ದೂರು ನಿವಾಸದಲ್ಲಿ ಸನ್ಮಾನಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಸಿಎ ರವಿರಾವ್, ಕಾರ್ಯದರ್ಶಿ ಗುರುದಾಸ್ ಶೆಣೈ, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟ್ ಸದಸ್ಯ ವಿಷ್ಣುಮೂರ್ತಿ ನಾಯಕ್, ವಸತಿ ನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ, ಶಾಲಾ ಮೇಲ್ವಿಚಾರಕ ರಾವೇಂದ್ರ ಜಿ., ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ಪಾಲಕರಾದ ಎಸ್.ಜಿ.ವಿನಾಯಕ ರಾವ್, ಕಜ್ಕೆ ಸಿದ್ದನಾಯ್ಕನಮನೆ, ಮುಖ್ಯಶಿಕ್ಷಕಿ ಪಾರ್ವತಿ ಎಂ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net