ಬಿಷಪ್ ಡಾ.ಜೋನ್ ಕರ್ವಾಲ್ಲೊ ಕುಂದಾಪುರ ಭೇಟಿ

gan
Published on

ಕುಂದಾಪುರ: ರಾಜಸ್ಥಾನದ ಆಜ್ಮೀರ್ ಧರ್ಮಪ್ರಾಂತ್ಯದಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಯಾದ ಮೂಲತಃ ಕುಂದಾಪುರ ಬಸ್ರೂರಿನವರಾದ ಬಿಷಪ್ ಡಾ.ಜೋನ್ ಕರ್ವಾಲ್ಲೊ ಕುಂದಾಪುರದ ರೋಜರಿ ಮಾತಾ ಇಗರ್ಜಿಗೆ ಭಾನುವಾರ ಭೇಟಿ ನೀಡಿ ಪವಿತ್ರ ಬಲಿದಾನವನ್ನು ಅರ್ಪಿಸಿದರು.

ಬಳಿಕ ಮಾತನಾಡಿ, ನಮಗೆ ಜನ್ಮ ಕೊಟ್ಟಿದ್ದು ದೇವರು, ನಮಗೆ ಸ್ವಾತಂತ್ರ ಕೊಟ್ಟಿದ್ದಾನೆ, ನಮಗೆ ಅವರ ಅಧಿಕಾರ ಹಂಚಿಕೊಟ್ಟಿದ್ದಾನೆ. ನಾವು ನ್ಯಾಯ ಸಮ್ಮತವಾಗಿ ಜೀವಿಸಬೇಕು. ನಮ್ಮ ಜೀವನವೇ ಇತರರಿಗೆ ಆದರ್ಶವಾಗಬೇಕು ಎಂದರು.

ರೋಜರಿ ಮಾತಾ ಚರ್ಚ್‌ನ ಧರ್ಮಗುರು ಪೌಲ್ ರೇಗೊ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net