ಅಧ್ಯಕ್ಷರಾಗಿ ಡಾ.ಕೆ.ಸುರೇಶ್ ಐತಾಳ್ ಆಯ್ಕೆ

aghoreshwara
ಡಾ.ಕಾರ್ತಟ್ಟು ಸುರೇಶ್ ಐತಾಳ್ ಅವರಿಗೆ ನಿರ್ಗಮಿತ ಅಧ್ಯಕ್ಷ ಕೆ.ಚಂದ್ರಶೇಖರ್ ಕಾರಂತರು ಅಧಿಕಾರ ಹಸ್ತಾಂತರಿಸಿದರು.
Published on

ಕೋಟ: ಸಾಲಿಗ್ರಾಮದ ಚಿತ್ರಪಾಡಿಯ ಕಾರ್ತಟ್ಟು ಶ್ರೀ ಅಘೋರೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಧಾರ್ಮಿಕ ಹಾಗೂ ಸಮಾಜ ಸೇವಕ ಡಾ.ಕಾರ್ತಟ್ಟು ಸುರೇಶ್ ಐತಾಳ್ ಆಯ್ಕೆಯಾಗಿದ್ದಾರೆ.

ಭಾನುವಾರ ದೇವಳದ ಸಭಾಂಗಣದಲ್ಲಿ ನಡೆದ ಪದಪ್ರದಾನ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಕೆ.ಚಂದ್ರಶೇಖರ್ ಕಾರಂತರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಪೂರ್ವಭಾಗಿಯಾಗಿ ದೇವಳದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೀಯಾಳಾಭಿಷೇಕ, ಗಣಹೋಮ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ದೇವಳದ ಖಜಾಂಚಿ ಪ್ರಭಾಕರ ಮಧ್ಯಸ್ಥ, ಗಾಯತ್ರಿ ಚಂದ್ರಶೇಖರ್ ಕಾರಂತ, ಸುಮಾ ಸುರೇಶ್ ಐತಾಳ್, ಸದಸ್ಯರಾದ ನಿತ್ಯಾನಂದ ನಾಯರಿ, ಪ್ರಕಾಶ್ ಮಧ್ಯಸ್ಥ, ಸುಬ್ರಾಯ ಗಾಣಿಗ, ವಸಂತಿ ನಾಯರಿ, ನಾಗರಾಜ್ ಐತಾಳ್, ವೆಂಕಟೇಶ್ ಕೆ., ರಾಘವೇಂದ್ರ ನಾಯರಿ, ಸ್ನೇಹಲತಾ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಶ್ಯಾಮ ಸುಂದರ ನಾಯರಿ ಸ್ವಾಗತಿಸಿದರು. ಹಿರಿಯರಾದ ರಾಮಚಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಳದ ಪ್ರಧಾನ ಅರ್ಚಕ ವಿದ್ವಾನ್ ಬಾಲಕೃಷ್ಣ ನಕ್ಷತ್ರಿ ಶುಭ ಕೋರಿದರು. ಸದಸ್ಯ ಉಮೇಶ್ ನಾಯರಿ ನಿರೂಪಿಸಿ, ಶಿವಾನಂದ ವಂದಿಸಿದರು. ಪ್ರತೀಕ್ಷಾ ಮಧ್ಯಸ್ಥ, ಪ್ರದೀಪ್ ಮಧ್ಯಸ್ಥ, ರವಿ ಬನ್ನಾಡಿ ಹಾಗೂ ಮಹೇಶ್ ನಾಯರಿ ಕಾರ್ತಟ್ಟು ಭಕ್ತಿಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net