ಹೊನಲು ಬೆಳಕಿನ ಕಬಡ್ಡಿ ಟೂರ್ನಿ

honalu
Published on

ಹೆಬ್ರಿ: ಕಡ್ತಲ ಗ್ರಾಮೀಣ ಕಾಂಗ್ರೆಸ್ ಮತ್ತು ಉದಯ್ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗದ ಆಶ್ರಯದಲ್ಲಿ ದೊಂಡೇರಂಗಡಿಯಲ್ಲಿ ನಡೆದ ಸೌಹಾರ್ದ ಟ್ರೋಫಿ ಕಬಡ್ಡಿ ಟೂರ್ನಿಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಭಾಗದಲ್ಲಿ ಜಲದುರ್ಗ ತೆಳ್ಳಾರ್ (ಪ್ರಥಮ), ಪ್ರೀತಮ್ ಅಭಿಮಾನಿ ಬಳಗ ಬೈರಂಪಳ್ಳಿ (ದ್ವಿತೀಯ), ಪ್ರೀತಮ್ ಅಭಿಮಾನಿ ಬಳಗ ಮುಟ್ಲುಪಾಡಿ (ತೃತೀಯ), ಆರೋಹಿ ಬ್ರದರ್ಸ್ ಕುಕ್ಕುಜೆ ಚತುರ್ಥ ಸ್ಥಾನ ಪಡೆಯಿತು.

65 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಕ್ವಾಯ್ಸಾ ಆಟೋ ಲಿಂಕ್ಸ್ ಮಡಂತ್ಯಾರು (ಪ್ರಥಮ), ಕಾಲೇಜು ಫ್ರೆಂಡ್ಸ್ ಕುಕ್ಕುಜೆ (ದ್ವಿತೀಯ), ಆರೋಹಿ ಬ್ರದರ್ಸ್ ಕುಕ್ಕುಜೆ (ತೃತೀಯ), ಯತೀಶ್ ಶೆಟ್ಟಿ ಅಭಿಮಾನಿ ಬಳಗ (ಚತುಥ) ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಸಂಪತ್ ಪೂಜಾರಿ ಕುಕ್ಕುಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ.ಸಂತೋಷ್ ಕುಮಾರ್ ಶೆಟ್ಟಿ, ಡಾ.ಪ್ರಮೋದ್ ಕುಮಾರ್ ಹೆಗ್ಡೆ, ರಾಘವ ದೇವಾಡಿಗ, ಜಗದೀಶ ಹೆಗ್ಡೆ, ಅಖಿಲೇಶ ಶೆಟ್ಟಿ, ರಾಘವ ಕುಕ್ಕುಜೆ, ಸುಂದರ ಶೆಟ್ಟಿಗಾರ್, ಸತೀಶ್ ಪೂಜಾರಿ, ಹರೀಶ್ ದುಗ್ಗನ್ ಬೆಟ್ಟು, ದಿಕ್ಷಿತ್ ಶೆಟ್ಟಿ, ರೇಖಾ, ಶಶಿಕಲಾ ಭಟ್, ಶಿವರಾಜ್ ಪೂಜಾರಿ, ಪುರಂದರ ನಾಯಕ್, ದೀಪಕ್ ಶೆಟ್ಟಿ, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net