ಆದ್ಯತೆ ನೆಲೆಯಲ್ಲಿ ಗ್ರಾಮ ಅಭಿವೃದ್ಧಿ

chara
Published on

ಹೆಬ್ರಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಾರ್ವಜನಿಕರಿಗೆ ಅನೇಕ ಸವಲತ್ತುಗಳಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೆಲೆಯಲ್ಲಿ ಕಾರ್ಯಕ್ರಮ ರೂಪಿಸಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಚಾರ ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ ಹುತ್ತುರ್ಕೆ ಹೇಳಿದರು. ಚಾರ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

94 ಸಿ, ಹಾಗೂ 53ಯ ಬಹುತೇಕ ಅರ್ಜಿ ಬಾಕಿ ಇದ್ದು, ಶೀಘ್ರದಲ್ಲಿ ಅದನ್ನು ವಿಲೇವಾರಿ ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ ಮನವಿ ಮಾಡಿದರು.

ನೋಡಲ್ ಅಧಿಕಾರಿ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಗ್ರಾಪಂ ಉಪಾಧ್ಯಕ್ಷ ಕೃಷ್ಣ ನಾಯ್ಕ, ಸದಸ್ಯರಾದ ಕುಸುಮಾ ಪ್ರಭು, ರಾಘವೇಂದ್ರ, ಎಂ.ಶಶಿಕಲಾ, ಸಂತೋಷ್ ಶೆಟ್ಟಿ, ಜಯಲಕ್ಷ್ಮೀ, ನಾಗರತ್ನ, ಸುಮಲತಾ, ದೇವಿದಾಸ ಶೆಟ್ಟಿ, ವಾದಿರಾಜ ಶೆಟ್ಟಿ ಚಾರ, ಮಮತಾ ಶೆಟ್ಟಿ, ರುಕ್ಮಿಣಿ, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು. ಪಿಡಿಒ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯೇಕ ಕಂದಾಯ ಗ್ರಾಮ ವೃತ್ತ

ಹೆಬ್ರಿ ಹಾಗೂ ಚಾರದಲ್ಲಿ ಒಬ್ಬರೇ ಗ್ರಾಮ ಆಡಳಿತ ಅಧಿಕಾರಿ ಇದ್ದು, ಜನಸಂಖ್ಯೆ ಹೆಚ್ಚಾಗಿರುವುದರಿಂದ ಒಬ್ಬರಿಗೆ ಸಮರ್ಥಕವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೆಬ್ರಿ ಹಾಗೂ ಚಾರವನ್ನು ಬೇರೆ ಬೇರೆ ಮಾಡಿ ಚಾರಗ್ರಾಮಕ್ಕೆ ಪ್ರತ್ಯೇಕ ಕಂದಾಯ ಗ್ರಾಮ ವೃತ್ತ ರಚಿಸಬೇಕು ಎಂದು ಸದಸ್ಯ ಚಾರ ವಾದಿರಾಜ ಶೆಟ್ಟಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net