

ಕೋಟ: ಕರ್ಣಾಟಕ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ರೂಪುಗೊಂಡು ರಾಷ್ಟ್ರೀಯ ಮಟ್ಟದಲ್ಲೂ ಶಾಖೆ ಹೊಂದಿ ಜನಮನ್ನಣೆ ಗಳಿಸಿದ ಬ್ಯಾಂಕ್ ಆಗಿದೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಹೇಳಿದರು.
ಕೋಟದ ಕರ್ಣಾಟಕ ಬ್ಯಾಂಕ್ 58ನೇ ವರ್ಷಾಚರಣೆ ಅಂಗವಾಗಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ಯಾಂಕ್‌ಗಳು ಜನರ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವುದಲ್ಲದೆ ಆರ್ಥಿಕ ಕ್ರೋಡೀಕರಣದ ಕೇಂದ್ರವಾಗಿದೆ. ಜನಸಾಮಾನ್ಯರ ಆರ್ಥಿಕ ಶಕ್ತಿಗೆ ಕರ್ಣಾಟಕ ಬ್ಯಾಂಕ್ ಕೊಡುಗೆ ಅನನ್ಯ ಎಂದರು.
ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ವಾದಿರಾಜ್ ಭಟ್ ಉದ್ಘಾಟಿಸಿದರು.
ಧಾರ್ಮಿಕ ವಿಧಿ ವಿಧಾನ ಶ್ರೀಧರ ಪುರಾಣಿಕ್ ನೆರವೇರಿಸಿದರು. ಕೋಟ ಶಾಖೆ ಸಿಬ್ಬಂದಿ ಶ್ರೀಮತಿ ನಾಗೇಶ್ ಮಯ್ಯ ಧಾರ್ಮಿಕ ವಿಧಿವಿಧಾನದಲ್ಲಿ ಭಾಗಿಯಾದರು. ಕರ್ಣಾಟಕ ಬ್ಯಾಂಕ್ ನಿವೃತ್ತ ಡಿ.ಜಿ.ಎಂ.ಆನಂದರಾಮ ಅಡಿಗ, ಸಾನ್ವಿ ಟೆಕ್ನಾಲಜಿ ಚೇರ್ಮನ್ ಚಿನ್ಮಯ್ ಬಾಯರಿ, ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಮಯ್ಯ ಉಪಸ್ಥಿತರಿದ್ದರು. ಕೋಟ ಶಾಖೆ ಸಹಾಯಕ ಪ್ರಭಂಧಕಿ ಜ್ಯೋತಿ ಕುಮಾರಿ ಸ್ವಾಗತಿಸಿದರು. ಸಿಬ್ಬಂದಿ ವಿನಯ್ ಕಾಂಚನ್ ನಿರೂಪಿಸಿದರು. ಸಮಿತ್ ವಂದಿಸಿದರು.