ಹನಿಮೂನ್​ ವೇಳೆ ಭಯಾನಕ ರಹಸ್ಯ ಬಿಚ್ಚಿಟ್ಟ ಪತಿರಾಯನ ಮೇಲೆ ಉಗ್ರರೂಪ ತಾಳಿದ ಮಹಿಳೆ!

Woman
Published on

ಲಖನೌ: ವರದಕ್ಷಿಣೆ ಕಿರುಕಳ, ಹಲ್ಲೆ, ವಂಚನೆ ಸೇರಿದಂತೆ ಇತರೆ ಪ್ರಕರಣಗಳಡಿಯಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ವಿರುದ್ಧ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಹೋಟೆಲ್​ ಒಂದರಲ್ಲಿ ಹನಿಮೂನ್​ಗೆ ವ್ಯವಸ್ಥೆ ಮಾಡಲಾಗಿತ್ತು. ತಾನೊರ್ವ ಸಲಿಂಗಕಾಮಿ ಮತ್ತು ತನಗೆ ಗಂಭೀರವಾದ ಕಾಯಿಲೆ ಇರುವುದಾಗಿ ಹನಿಮೂನ್​ ದಿನದಂದೇ ಪತಿ ಹೇಳಿಕೊಂಡ. ಅಲ್ಲದೆ, ಕೊಲೆ ಮಾಡಲು ಯತ್ನಿಸಿದ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ವರದಕ್ಷಿಣೆಗಾಗಿ ಅತ್ತೆ ಕಿರುಕುಳ ನೀಡುತ್ತಾಳೆಂದು ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂತ್ರಸ್ತ ಮಹಿಳೆಯು ಉತ್ತರ ಪ್ರದೇಶದ ಕೊಟ್ವಾಲಿ ಏರಿಯಾದವಳು. ಆಲಿಘಡ ರಸ್ತೆಯಲ್ಲಿ ವಾಸವಿರುವ ವ್ಯಕ್ತಿಯೊಂದಿಗೆ 2019ರ ಮೇ ತಿಂಗಳಲ್ಲಿ ಮದುವೆಯಾಗಿತ್ತು. ತನ್ನ ಗಂಡ ಓರ್ವ ಡಾಕ್ಟರ್​. ಮದುವೆಗಾಗಿ 30 ಲಕ್ಷ ಖರ್ಚು ಮಾಡಲಾಗಿತ್ತು. ಆದರೂ ಅತ್ತೆಗೆ ಇದು ಸಮಾಧಾನ ತಂದಿರಲಿಲ್ಲ. ಮದುವೆಯ ನಂತರವೂ ಹಣಕ್ಕಾಗಿ ಪೀಡಿಸಿದರು ಎಂದು ದೂರಿದ್ದಾಳೆ.

ಹೋಟೆಲ್​ನಲ್ಲಿ ಪತಿ ನನ್ನ ಮೇಲೆ ಹಲ್ಲೆ ಮಾಡಿದರು. ನಡೆದಾಡುವಾಗ ಬೆಟ್ಟದಿಂದ ಕಳಕ್ಕೆ ನೂಕಿ ಕೊಲ್ಲಲು ಯತ್ನಿಸಿದರು. ಆದರೂ ನಾನು ಬದುಕುಳಿದೆ. ಬಳಿಕ ಹೋಟೆಲ್​ಗೆ ಬಂದ ನಂತರವೂ ಬೆದರಿಕೆ ಹಾಕಿದರು. ಇದೇ ವೇಳೆ ನಾನೊಬ್ಬ ಸಲಿಂಗಕಾಮಿ ಎಂದರು. ಮೊಬೈಲ್​ ಹೊಡೆದು ಹಾಕಿದರು. ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದರು. ಆದರೆ, ಹೋಟೆಲ್​ ಸಿಬ್ಬಂದಿ ರಕ್ಷಣೆ ಮಾಡಿದರು. ಮಾಹಿತಿ ತಿಳಿದು ಮನಾಲಿ ಪೊಲೀಸರು ಸಹ ಬಂದರು. ಅವರು ಕೂಡ ಪತಿಯೊಂದಿಗೆ ಮಾತನಾಡಿದರು. ಆ ವೇಳೆ ಶಾಂತವಾಗಿಯೇ ನಟಿಸಿದರು.

ಹನಿಮೂನ್​ ಬಳಿಕ ಮನಗೆ ಮರಳಿದೆವು. ಇತ್ತ ಅತ್ತೆಯು ಸಹ ಮನೆಗೆ ಬಂದರು. ಈ ವೇಳೆ ನಾನು ತವರಿಗೆ ಹೋದೆನು. 2019ರ ಆಗಸ್ಟ್​ ತಿಂಗಳಲ್ಲಿ ನಮ್ಮ ಮನೆಗೆ ಬಂದ ಅತ್ತೆ ಲಕ್ಷಾಂತರ ರೂಪಾಯಿ ಕೇಳಿದರು. ಆವಾಗಲೂ ದೂರು ನೀಡಿದ್ದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲವನ್ನು ಸಹಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ಮಹಿಳೆ ಸೆ. 11ರಂದು ಮಹಿಳಾ ಪೊಲೀಸ್​ ಠಾಣೆಯಲ್ಲಿ ಪತಿ ವಿರುದ್ಧ ಅನೇಕ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net