ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ನಟ ವಿಕಾಸ್​ ಸೇಥಿ

Untitled-design-94
Published on

ಮುಂಬೈ: ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಹೆಸರು ಗಳಿಸಿದ್ದ ನಟ ವಿಕಾಸ್ ಸೇಥಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ನಟ ತಮ್ಮ 48ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಮೂಲಕ ಜನಮನ್ನಣೆ ಗಳಿಸಿದ ನಟನ ನಿಧನಕ್ಕೆ ಅನೇಕ ಸೆಲಿಬ್ರಿಟಿಗಳು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ವಿಕಾಸ್​ ಸೇಥಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಬಣ್ಣದಲೋಕದಿಂದ ಸ್ವಲ್ಪ ದೂರ ಉಳಿದಿದ್ದರು ನಟ ವಿಕಾಸ್​ ಸೇಥಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ನಟ ಆಗಾಗ್ಗೆ ತಮ್ಮ ಪತ್ನಿ ಜಾನ್ವಿ ಸೇಥಿ ಮತ್ತು ಮಕ್ಕಳೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ವಿಕಾಸ್​ ಮೇ 12ರಂದು ಕೊನೆಯ ಪೋಸ್ಟ್​ ಮಾಡಿದ್ದು ಅದರ ಮೂಲಕ ಅವರು ತಮ್ಮ ತಾಯಿಯ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸದಾ ಫಿಟ್​ ಆಗಿ ಕಾಣುತ್ತಿದ್ದ ನಟ ಇತ್ತೀಚಿನ ದಿನಗಳಲ್ಲಿ ಮಾಡಿರುವ ಪೋಸ್ಟ್​ಗಳಲ್ಲಿ ವಿಕಾಸ್​ ಸೇಥಿ ಅವರನ್ನು ನೋಡಿದರೆ ಸಾಕಷ್ಟು ತೂಕ ಹೆಚ್ಚಿಸಿಕೊಂಡಿರುವುದು ತಿಳಿಯುತ್ತದೆ. ಕಿರುತೆರೆ, ಟಿವಿ ಕಾರ್ಯಕ್ರಮಗಳ ಹೊರತಾಗಿ ವಿಕಾಸ್ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಓಹ್!, ದೀವಾನಪನ್ ಮತ್ತು ಕಭಿ ಖುಷಿ ಕಭಿ ಗಮ್ ಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟನ ಸಾವಿನ ಬಗ್ಗೆ ಕುಟುಂಬದಿಂದ ಯಾವುದೇ ರೀತಿಯ ಹೇಳಿಕೆ ಹೊರಬಿದ್ದಿಲ್ಲ. ಪತ್ನಿ ಜಾನ್ವಿ ಮತ್ತು ಅವಳಿ ಮಕ್ಕಳನ್ನು ಅಗಲಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net