ಸ್ತನ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರೂ ರಾಂಪ್​ವಾಕ್ ಮಾಡಿದ ನಟಿ: ಹಿನಾ ವೃತ್ತಿಪರತೆಗೆ ನೆಟ್ಟಿಗರ ಶ್ಲಾಘನೆ

ಮುಂಬೈ: ನಟಿ ಹಿನಾ ಖಾನ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದು 3ನೇ ಹಂತದಲ್ಲಿದೆ. ಕೆಲವು ದಿನಗಳ ಹಿಂದೆ ಕೀಮೋಥೆರಪಿ ಮಾಡಿಸಿಕೊಂಡಿರುವ ಈ ನಟಿ ಸಾವಿನೊಂದಿಗೆ ಸೆಣೆಸುತ್ತಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದು, ನೆಟಿಜನ್‌ಗಳನ್ನು ಮೆಚ್ಚಿ ಹೆಮ್ಮೆಪಡುವಂತೆ ಮಾಡಿದೆ.

ಇದನ್ನೂ ಓದಿ: ‘ಆಕೆ ನಟನೆ ಕಂಡು ಬೆರಗಾದೆ’: ನಟಿ ಜಾಹ್ನವಿ ಕುರಿತು ಪ್ರಶಂಸೆ ಮಾತುಗಳನ್ನಾಡಿದ ಜೂ.ಎನ್​ಟಿಆರ್!​

ಫ್ಯಾಷನ್ ಶೋನಲ್ಲಿ ಹಿನಾ ಪಾಲ್ಗೊಂಡಿದ್ದ ಫೋಟೋಗಳು ಮತ್ತು ವೀಡಿಯೊಗಳು ಈಗ ವೈರಲ್ ಆಗಿದ್ದು, ಇದರಲ್ಲಿ ನಟಿ ವಧುವಿನ ಕೆಂಪು ಲೆಹೆಂಗಾದಲ್ಲಿ ಚಿನ್ನದ ಆಭರಣಗಳೊಂದಿಗೆ ಕಣ್ಣುಕುಕ್ಕುವಂತೆ ಮೋಹಕವಾಗಿ ಕಾಣುತ್ತಿದ್ದಾಳೆ.

ಇನ್ನು ಹೀನಾ ಅನಾಯಾಸವಾಗಿ ರಾಂಪ್‌ ಮೇಲೆ ನಡೆದಾಗ ಬೆಳದಿಂಗಳು ಚೆಲ್ಲಿದಂತೆ ನಗೆ ಬೀರುತ್ತಾಳೆ. ಪ್ರೇಕ್ಷಕರು ಮತ್ತು ನೆಟಿಜನ್ಸ್​ ಆಕೆಯ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

ಗಂಭೀರವಾದ ರೋಗ ಪತ್ತೆಯಾದರೆ ಎಂಥವರ ಮನಸ್ಥಿತಿಯೂ ಕುಗ್ಗಿಹೋಗುತ್ತದೆ. ಆದರೆ ಮಾಮೂಲಿನಂತೆ ತಾವು ದೈನಂದಿನ ಜೀವನದಲ್ಲಿ ಬದಲಾವಣೆಯಿಲ್ಲದಂತೆ ಮುನ್ನಡೆಯುತ್ತಿರುವುದು ನಿಮ್ಮ ದೈರ್ಯವನ್ನು ಎತ್ತಿ ತೋರುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೀನು ತುಂಬಾ ಧೈರ್ಯಶಾಲಿ, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೀರಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹೀನಾಗೆ ಜೂನ್‌ನಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಈ ರೋಗವನ್ನು ಜಯಿಸಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಆಕೆ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ರೀಲ್ಸ್​ಗಾಗಿ ಸ್ವಿಮ್ಮಿಂಗ್​ ಫೂಲ್​ನಲ್ಲಿ ರಿವರ್ಸ್​ ಡೈ ಹೊಡೆದ ವ್ಯಕ್ತಿ: ನಿನಗಿದು ಬೇಕಿತ್ತಾ ಎಂದ ನೆಟ್ಟಿಗರು..ಕಡೆಗೆ ಏನಾಯ್ತು ನೋಡಿ!

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…