ಹೈದರಾಬಾದ್ : ಶ್ರೀದೇವಿ ಪುತ್ರಿ ಜಾಹ್ನವಿ ನಟನೆ ಮತ್ತು ನೆನಪಿನ ಶಕ್ತಿ ಅಪಾರವಾಗಿದೆ. ಆಕೆಯಲ್ಲಿನ ಆ ಕಲೆಗಾರಿಕೆ ಕಂಡು ಬೆರಗಾದೆ ಎಂದು ಜೂ.ಎನ್ ಟಿಆರ್ ನಟಿ ಜಾಹ್ನವಿಯನ್ನು ಹಾಡಿಹೊಗಳಿದ್ದಾರೆ.
ಜೂ.ಎನ್ ಟಿಆರ್ ನಾಯಕನಾಗಿ ನಟಿಸಿರುವ ಚಿತ್ರ ‘ದೇವರ’. ಚಿತ್ರದ ಮೂಲಕ ನಟಿ ಜಾನ್ವಿ ಕಪೂರ್ ತೆಲುಗಿಗೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಇದೇ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಆಕೆ ಅದ್ಭುತ ಅದ್ಭುತ ಪ್ರತಿಭೆ ಹೊಂದಿದ್ದು, ಬಾಲಿವುಡ್‌ನಿಂದ ಬಂದರೂ ತೆಲುಗನ್ನು ಅರ್ಥೈಸಿಕೊಂಡು ಒಳ್ಳೆಯ ಡೈಲಾಗ್‌ಗಳನ್ನು ನೀಡುತ್ತಾಳೆ. ನಾನು ಆಶ್ಚರ್ಯಪಟ್ಟೆ ಎಂದಿದ್ದಾರೆ.
ಬಳಿಕ ದೇವರ ಬಗ್ಗೆ ಮಾತನಾಡಿ, ”ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿರುವ ಧೈರ್ಯವನ್ನು ಹೊರತರಲು ಇದರಲ್ಲಿನ ಹೀರೋ ಪ್ರೇರೇಪಿಸುತ್ತಾನೆ. ಆದರೆ ಈ ಚಿತ್ರದಲ್ಲಿ ಹೀರೋ ಧೈರ್ಯವಾಗಿ ನಟಿಸುವ ಕೆಲವರಿಗೆ ಭಯ ತೋರಿಸಲು ಬರುತ್ತಾನೆ.ಇದೊಂದು ಫುಲ್ ಸ್ಕೇಲ್ ಆಕ್ಷನ್ ಸಿನಿಮಾ. 35 ದಿನಗಳ ಕಾಲ ಫೈಟ್ ಸೀಕ್ವೆನ್ಸ್‌ಗಾಗಿ ನಾವು ಶ್ರಮಿಸಿದ್ದೇವೆ, ಮೊದಲ 15 ನಿಮಿಷಗಳಲ್ಲಿ ನಾವು ವಿಭಿನ್ನ ಕಥೆಯಿದೆ ಎಂದು ಹೇಳಿದರು.
‘ಅವರಿಬ್ಬರೂ ಸಂಪರ್ಕದಲ್ಲಿದ್ದರು’: ಕೋಲ್ಕತ್ತಾ ಪ್ರಕರಣದಲ್ಲಿ ಘಟನೆ ಕುರಿತು ಕೋರ್ಟ್ಗೆ ಸಿಬಿಐ ಮಾಹಿತಿ