ಪುತ್ತೂರು ಗ್ರಾಮಾಂತರ: ಮನೆಯ ಹಿಂಭಾಗದ ಗುಡ್ಡ ಕುಸಿದು ಬಿದ್ದು ಮನೆಯೊಂದಕ್ಕೆ ಹಾನಿಯಾದ ಘಟನೆ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡವನ್ನೂರು ಗ್ರಾಮದ ಸಾರಕೂಟೇಲು ಎಂಬಲ್ಲಿ ನಡೆದಿದೆ.

ಮೇಲ್ಛಾವಣಿಗೆ ಹಾನಿ, ಬಿರುಕು ಬಿಟ್ಟ ಗೋಡೆ
ಸಾರಕೂಟೇಲು ನಿವಾಸಿ ಗ್ರೇಟಾ ಡಿಸೋಜ ಎಂಬುವರ ಹೆಂಚಿನ ಮನೆಯ ಹಿಂಭಾಗಕ್ಕೆ ಪಕ್ಕದ ಗುಡ್ಡ ಕುಸಿದು ಬಿದ್ದಿದೆ. ಮಾಡು ಹಾನಿಗೊಂಡಿದ್ದು, ಮನೆಯ ಗೋಡೆಯೂ ಬಿರುಕು ಬಿಟ್ಟಿದೆ. ಗ್ರೇಟಾ ಡಿಸೋಜ ಮತ್ತು ಪತಿ, ಪುತ್ರಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದರು.
ಸ್ಥಳಕ್ಕೆ ಅಧಿಕಾರಿಗಳು ಭೇಟಿ, ಪರಿಶೀಲನೆ
ಸ್ಥಳಕ್ಕೆ ಬಡಗನ್ನೂರು ಗ್ರಾಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಕಲಾವತಿ ಎಸ್.ಗೌಡ ಪಟ್ಲಡ್ಕ, ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಮೋನಪ್ಪ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.