ಗೋಳಿಯಂಗಡಿ: ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿ 12ನೇ ವರ್ಷದ ನೇಮೋತ್ಸವ, ಶಿವರಾಯನ ಕೋಲ, ಗೆಂಡಸೇವೆ ಇತ್ತೀಚೆಗೆ ಸಂಪನ್ನಗೊಂಡಿತು.

ನೇಮೋತ್ಸವ ಪ್ರಯುಕ್ತ ಅಗಲು ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಹಿಲಿಯಾಣ ಎಜಿನಮನೆ ಕವಿತಾ ಉಮೇಶ್ ಶೆಟ್ಟಿ ಅವರಿಂದ ಅನ್ನಸಂತರ್ಪಣೆ ಸೇವೆ, ಸಂಜೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ ಹಿಲಿಯಾಣ ಗರೋಡಿಮನೆ ಕುಸುಮ ರಾಮ ಪೂಜಾರಿ ಕೆದೂರು, ಪ್ರೇಮಾ ಪ್ರಭಾಕರ ಪೂಜಾರಿ ಬೆಳಗಾಂ, ಯಶೋದಾ ಶಂಕರ ಪೂಜಾರಿ ಸಾಗರ ಅವರಿಂದ ಮಹಾ ಅನ್ನಸಂತರ್ಪಣೆ ಸೇವೆ, ಶಿವರಾಯನ ಕೋಲಸೇವೆ, ದರ್ಶನ, ಶಿವರಾಯನ ಗೆಂಡಸೇವೆ, ಪರಿವಾರ ದೈವಗಳ ಕೋಲ, ಗುರುವಾರ ನಾಲ್ಕು ಗ್ರಾಮದವರಿಂದ ಮಹಾಮಾರಿ ಸೇವೆ ನಡೆಯಿತು.
ಗರೋಡಿ ಗೌರವಾಧ್ಯಕ್ಷ ಹಳ್ಳಿ ವೆಂಕಟೇಶ್ ಭಟ್, ಎಚ್.ತಾರಾನಾಥ ಶೆಟ್ಟಿ ಹಿಲಿಯಾಣ, ಅಧ್ಯಕ್ಷ ವೈ ಕರುಣಾಕರ ಶೆಟ್ಟಿ ಯರುಕೋಣೆ, ಕಾರ್ಯದರ್ಶಿ ಸಂತೋಷ ಶೆಟ್ಟಿ ಹಿಲಿಯಾಣ, ಗರೋಡಿ ಅರ್ಚಕ ಶೀನ ಪೂಜಾರಿ, ಕರುಣಾಕರ ಪೂಜಾರಿ ಮತ್ತು ವೃಂದದವರು, ಕೆರ್ಜಾಡಿ ಗರೋಡಿ ಅರ್ಚಕ ದಯಾನಂದ ಪೂಜಾರಿ, ನೇಮೋತ್ಸವದ ಪ್ರಮುಖ ಸೇವಾದಾರರು, ಭಕ್ತರು ಪಾಲ್ಗೊಂಡಿದ್ದರು.