

ವಿಜಯವಾಣಿ ಸುದ್ದಿಜಾಲ ಬೈಂದೂರು
ಜನರು ಕೇವಲ ಸಂಪತ್ತು, ಅಧಿಕಾರ, ಬದುಕಿನ ಹೋರಾಟಗಳಲ್ಲಿ ಮುಳುಗಿದರೆ ಸಮಾಜದ ಸ್ವಾಸ್ಥೃ ಕೆಡುತ್ತದೆ. ಮನುಷ್ಯ ಸಹಜತೆಯಿಂದ ದೂರವಾದಂತೆ ಅಲ್ಲಿ ದುರದೃಷ್ಟಕರ ಘಟನೆ ನಡೆದಿವೆ. ಸಮಾಜ ಸಹಜತೆಯಿಂದ ದೂರವಾದಂತೆ ರಂಗ ಚಟುವಟಿಕೆ ಎಲ್ಲರನ್ನೂ ಎಚ್ಚರಿಸುವ ಕೆಲಸ ಮಾಡುತ್ತವೆ ಎಂದು ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಹೇಳಿದರು.
ಬೈಂದೂರು ಲಾವಣ್ಯದ 48ನೇ ವಾರ್ಷಿಕೋತ್ಸವ, ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ-2025ರ ಐದು ದಿನಗಳ ರಂಗೋತ್ಸವ ಸಮಾರೋಪದಲ್ಲಿ ಮಾತನಾಡಿದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಸಿಇಒ ವಿಷ್ಣು ಆರ್.ಪೈ ಅಧ್ಯಕ್ಷತೆ ವಹಿಸಿದ್ದರು. ಭಾಗವತ ಅಣ್ಣಪ್ಪ ದೇವಾಡಿಗ ಬಿಜೂರು, ಸಂಗೀತ ನಿರ್ದೇಶಕ ಗೀತಂ ಗಿರೀಶ್, ಗಾಯಕಿ ಪೂರ್ಣಿಮಾ ವಿ.ಪೈ, ಹಿರಿಯ ರಂಗ ಕಲಾವಿದ ಬಿ.ಗಣೇಶ ಕಾರಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿಗಳಾದ ಶ್ರೀಧರ ಪೂಜಾರಿ, ಜಗದೀಶ ಶೆಟ್ಟಿ ಕುದ್ರುಕೋಡು, ಶಿಕ್ಷಕರ ಸಂಘ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗಿರೀಶ್ ಶ್ಯಾನುಭಾಗ್, ಡಾ.ಬಿ.ಆರ್.ಆಂಬೇಡ್ಕರ್ ಮಹಿಳಾ ಸಂಘ ಅಧ್ಯಕ್ಷೆ ನಾಗರತ್ನ ಭಾಸ್ಕರ, ರಂಗ ಕಲಾವಿದ ಯು.ರಾಜ್‌ಗೋಪಾಲ ವೈದ್ಯ ಉಪಸ್ಥಿತರಿದ್ದರು. ಲಾವಣ್ಯದ ವ್ಯವಸ್ಥಾಪಕ ಗಣಪತಿ ಎಸ್. ಸ್ವಾಗತಿಸಿದರು. ಚೈತ್ರಾ ಯಡ್ತರೆ ನಿರೂಪಿಸಿದರು. ಹರೇಗೋಡು ಉದಯ ಆಚಾರ್ಯ ವಂದಿಸಿದರು.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಈ ಸಂಸ್ಥೆ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಪ್ರಬುದ್ಧ ಕಲಾವಿದರ ತಂಡವಾಗಿರುವ ಲಾವಣ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಮಹೋನ್ನತ ಸಾಧನೆಯಾಗಿದೆ. ಆಧುನಿಕತೆ ಬದಲಾವಣೆಯೊಂದಿಗೆ ರಂಗಭೂಮಿ ತನ್ನ ಮೌಲ್ಯ ಉಳಿಸಿಕೊಂಡು ಮುನ್ನೆಡೆಯಬೇಕು. -ಡಾ.ಶ್ರೀಪಾದ ಭಟ್ ರಂಗ ನಿರ್ದೇಶಕ https://www.vijayavani.net/marathi-sangh-office-bearers-take-oath https://www.vijayavani.net/compassion-for-the-future-of-cultural-education