ಆಕೆಯ ತುಟಿ ಮತ್ತು… ಬಾಲಿವುಡ್ ಬ್ಯೂಟಿ ಮೃನಾಲ್​ ಬಗ್ಗೆ ವಿಜಯ್​ ದೇವರಕೊಂಡ ಓಪನ್​ ಟಾಕ್

Mrunal Thakur
Published on

ಹೈದರಾಬಾದ್​: ಮೃನಾಲ್ ಠಾಕೂರ್. ಈ ಹೆಸರು ಈಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ತೆಲುಗಿನಲ್ಲಿ ತಾನು ನಟಿಸಿದ ಕೇವಲ ಎರಡೇ ಚಿತ್ರಕ್ಕೆ ಮೃನಾಲ್​ ಸ್ಟಾರ್ ನಟಿ ಇಮೇಜ್ ಪಡೆದುಕೊಂಡಿದ್ದಾರೆ. ಮೂಲತಃ ಬಾಲಿವುಡ್ ಬೆಡಗಿಯಾಗಿರುವ ಮೃನಾಲ್​, ಟಾಲಿವುಡ್​ನಲ್ಲಿ ಅಪಾರ ಕ್ರೇಜ್ ಗಳಿಸಿದ್ದಾರೆ. ತನ್ನ ಮನಮೋಹಕ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಕದ್ದಿರುವ ಮೃನಾಲ್​, ಇದೀಗ "ಫ್ಯಾಮಿಲಿ ಸ್ಟಾರ್​" ಮತ್ತೊಂದು ತೆಲುಗು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ಫ್ಯಾಮಿಲಿ ಸ್ಟಾರ್​ ಸಿನಿಮಾ ಏಪ್ರಿಲ್​ 5ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದ ನಾಯಕ ವಿಜಯ್​ ದೇವರಕೊಂಡ. ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಕಾರಣ ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ. ಇತ್ತೀಚೆಗೆ ಗಲಾಟ ಪ್ಲಸ್​ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿದ ವಿಜಯ್​, ಮೃನಾಲ್​ ಠಾಕೂರ್​ ಜತೆಗೆ ತೆರೆ ಹಂಚಿಕೊಂಡಿದ್ದರ ಅನುಭವ ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಮೃನಾಲ್​ ಸೌಂದರ್ಯಕ್ಕೆ ತಾವು ಫಿದಾ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್​ ವೇಳೆ ನಿರ್ದೇಶಕ ಪರುಶುರಾಮ್​ ಮತ್ತು ಮೃನಾಲ್​ ಠಾಕೂರ್​ ಸಾಕಷ್ಟು ಸಹಾಯ ಮಾಡಿದರೂ ಅಂತಾನೂ ಹೇಳಿದ್ದಾರೆ.

ಮೃನಾಲ್​ ಅವರಿಗೆ ಚಿಕ್ಕಂದಿನಿಂದಲೂ ನಟನೆ ಎಂದರೆ ತುಂಬಾ ಇಷ್ಟ. ಭಾಷೆ ಗೊತ್ತಿಲ್ಲದಿದ್ದರೂ ಮೃನಾಲ್ ಅವರ ಮುಖಭಾವಗಳು ನಿಖರವಾಗಿವೆ. ಇದು ಆಗಾಗ ನನಗೆ ಆಶ್ಚರ್ಯವನ್ನುಂಟುಮಾಡಿದೆ. ನಿರ್ದೇಶಕರು ಹೇಳುವುದನ್ನು ಬೇಗ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ. ಅವರ ಸೌಂದರ್ಯ ಅವರಿಗೆ ದೇವರು ನೀಡಿರುವ ವಿಶೇಷ ಕೊಡುಗೆ. ಮೃನಾಲ್ ಅವರ ಕಣ್ಣು, ಮೂಗು ಮತ್ತು ತುಟಿಗಳು ವಿಶಿಷ್ಟವಾದ ಸೌಂದರ್ಯವನ್ನು ಹೊಂದಿವೆ ಎಂದು ನಟ ವಿಜಯ್ ದೇವರಕೊಂಡ ಹೇಳಿದರು.

ಫ್ಯಾಮಿಲಿ ಸ್ಟಾರ್ ಸಿನಿಮಾ ಇದೇ ತಿಂಗಳು 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಮೃನಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಆ್ಯಕ್ಷನ್ ಕೂಡ ಇದೆ. ಗೀತ ಗೋವಿಂದ ನಂತರ ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಜೊತೆಗೂಡಿದ ಎರಡನೇ ಚಿತ್ರ ಫ್ಯಾಮಿಲಿ ಸ್ಟಾರ್. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net